×
Ad

ಮಂಗಳೂರು: ಕೆಸಿಸಿಐ ನವೀಕೃತ ಕಟ್ಟಡ ಉದ್ಘಾಟನೆ

Update: 2023-09-25 21:57 IST

ಮಂಗಳೂರು, ಸೆ.25;ಸಾಮೂಹಿಕ ಪ್ರಯತ್ನ ದಿಂದ ಮಂಗಳೂರನ್ನು ಕರ್ನಾಟಕದ ವಾಣಿಜ್ಯ ರಾಜಧಾನಿಯಾಗಿ ಮಾಡಲು ಎಲ್ಲಾ ಅವಕಾಶಗಳಿವೆ ಎಂದು ಎಂಆರ್ಪಿಎಲ್ ನ (ರಿಫೈನರಿ)ವ್ಯವಸ್ಥಾಪಕ ನಿರ್ದೇಶಕ (ಹೆಚ್ಚು ವರಿ)ಸಂಜಯ್ ವರ್ಮ ತಿಳಿಸಿದ್ದಾರೆ.

ಅವರು ಇಂದು ನಗರದ ಕೆಸಿಸಿಐ ಯ ನವೀಕೃತ ಕಟ್ಟಡ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಂಗಳೂರು ನಗರ ಬಂದರು, ವಿಮಾನ ಸೌಕರ್ಯ, ರೈಲು ಸೌಲಭ್ಯ ಗಳನ್ನು ಒಂದೇ ಕಡೆ ಸಂಪರ್ಕ ಪಡೆದಿರುವ ರಾಜ್ಯದ ಪ್ರಮುಖ ಪ್ರದೇಶವಾಗಿರುವುದರಿಂದ ಈ ನಗರ ಸಹಜವಾಗಿ ರಾಜ್ಯ ದ ವಾಣಿಜ್ಯ ಕೇಂದ್ರ ವಾಗಲು ಸೂಕ್ತ ವಾಗಿದೆ. ಮಂಗಳೂರಿನ ನೈಸರ್ಗಿಕ ಸೂಕ್ಷ್ಮ ತೆಗಳನ್ನು ಉಳಿಸಿ ಕೊಂಡು ಈ ಪ್ರದೇಶದ ಸಮಗ್ರ ವಾದ ಸುಸ್ಥಿರ ಅಭಿವೃದ್ಧಿ ಯ ಬಗ್ಗೆ ಚಿಂತಿಸ ಬೇಕಾಗಿದೆ. ಈ ಪ್ರದೇಶದ ಅಭಿವೃದ್ಧಿ ಯಲ್ಲಿ ಕೆಸಿಸಿಐ ಜೊತೆ ಪಾಲುದಾರರಾಗಲೂ ಎಂಆರ್ಪಿಎಲ್ ಸಿದ್ಧ ವಾಗಿದೆ ಎಂದು ಸಂಜಯ್ ವರ್ಮ ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷ ತೆ ವಹಿಸಿದ್ದ ಕೆಸಿಸಿಐ ಅಧ್ಯಕ್ಷ ಎಂ.ಗಣೇಶ್ ಕಾಮತ್ ಮಾತನಾ ಡುತ್ತಾ, ಬಂದರು ಪ್ರದೇಶದ ಪ್ರಾಚೀನ ಪರಂಪರೆಯ ಶೈಲಿ ಯನ್ನು ಉಳಿಸಿ ಕೊಂಡು ಕೆಸಿಸಿಐ ನ ಕಟ್ಟಡ ವನ್ನು ನವೀಕರಿಸಲಾಗಿದೆ

ಜಿಲ್ಲೆಯಲ್ಲಿ ಇತರ ಪ್ರದೇಶಗಳ ಕಟ್ಟಡ ಗಳ ನವೀಕರಣದ ಸಂದರ್ಭದಲ್ಲಿ ಇದೊಂದು ಮಾದರಿಯಾಗಿದೆ ಎಂದರು.

ವಿನ್ಯಾಸ ಕಾರ ನಿರೇನ್ ಜೈನ್ ಮತ್ತು ನವೀಕರಣ ತಂಡದ ಮುಖ್ಯ ಸ್ಥ ಆನಂದ ಜಿ ಪೈ ಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕಾರ್ಯ ದರ್ಶಿ ದಿವಾಕರ ಪೈ ಕೊಚ್ಚಿ ಕಾರ್ ವಂದಿಸಿದರು.


 






 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News