ಮಂಗಳೂರು| ಬೋಂದೆಲ್ ಸಂತ ಲಾರೆನ್ಸ್ ಚರ್ಚ್‌ಗೆ ಸಚಿವ ಕೆ.ಜೆ ಜಾರ್ಜ್ ಭೇಟಿ
Update: 2025-10-06 20:48 IST
ಮಂಗಳೂರು: ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಬೋಂದೆಲ್ ಸಂತ ಲಾರೆನ್ಸ್ ಚರ್ಚ್‌ಗೆ ಭೇಟಿ ನೀಡಿದರು.
ವಂದನೀಯ ಧರ್ಮ ಗುರು ಪೀಟರ್ ಗೊನ್ಸಲ್ವಿಸ್ ಸ್ವಾಗತಿಸಿ, ಅವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ವಂದನೀಯ ಧರ್ಮ ಗುರು ಲಾರೆನ್ಸ್ ಕುಟಿನ್ಹಾ, ಪಾಲನಾ ಮಂಡಳಿಯ ಉಪಧ್ಯಕ್ಷ ಜಾನ್ ಡಿಸಿಲ್ವ ಮತ್ತು ಸದಸ್ಯರಾದ ರೂಡಿ ಪಿಂಟೋ ಅವರು ಸಚಿವ ಕೆ ಜೆ ಜಾರ್ಜ್ ರಿಗೆ ಶಾಲು, ಹೂಗುಚ್ಛ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಶಾಸಕರಾದ ಜೆ ಆರ್ ಲೋಬೊ, ಮಂಗಳೂರು ವಿದ್ಯುತ್ ನಿಗಮ ಮಂಡಳಿಯ ಅಧ್ಯಕ್ಷ ಹರೀಶ್ ಕುಮಾರ್, ರಚನಾ ಅಧ್ಯಕ್ಷ ಜಾನ್ ಮೊಂತೆರೋ ಮತ್ತು ಇನ್ನಿತರು ಉಪಸ್ಥಿತರಿದ್ದರು.