×
Ad

ಮಂಗಳೂರು | ಶಸ್ತ್ರ ಚಿಕಿತ್ಸೆ ಇಲ್ಲದೆ ಹಳೆ ಪೇಸ್‌ಮೇಕರ್ ಹಿಂತೆಗೆತ; ಒಮೇಗಾ ಆಸ್ಪತ್ರೆ ವೈದ್ಯರ ಹೊಸ ಸಾಧನೆ

Update: 2025-12-31 15:02 IST

ಮಂಗಳೂರು, ಡಿ.31: ರೋಗಿಯೊಬ್ಬರಿಗೆ 35 ವರ್ಷಗಳ ಹಿಂದೆ ಅಬಿಧಮನಿಯಲ್ಲಿ ಅಳವಡಿಸಿದ್ದ ಪೇಸ್ ಮೇಕರ್ ತಂತಿಯು ಸೋಂಕಿಗೆ ಒಳಗಾಗಿದ್ದು, ಶಸ್ತ್ರಚಿಕಿತ್ಸೆ ರಹಿತವಾಗಿ ಹೊರತೆಗೆಯುವಲ್ಲಿ ಒಮೇಗಾ ಆಸ್ಪತ್ರೆ ಹೊಸ ಸಾಧನೆ ಮಾಡಿದೆ ಎಂದು ಆಸ್ಪತ್ರೆಯ ನಿರ್ದೇಶಕ ಹಾಗೂ ಹಿರಿಯ ಹೃದ್ರೋಗ ತಜ್ಞ ಡಾ. ಮುಕುಂದ್ ಕೆ. ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, 68 ವರ್ಷದ ವ್ಯಕ್ತಿಯು ಅಬಿಧಮನಿಗೆ ಅಳವಡಿಸಿದ ಹಳೆಯ ಪೇಸ್ ಮೇಕರ್ ತಂತಿಗೆ ಸೋಂಕು ತಗುಲಿ ಸಮಸ್ಯೆಯಾಗಿತ್ತು. ಇದನ್ನು ಒಮೇಗಾ ಆಸ್ಪತ್ರೆಯ ಹೃದ್ರೋಗ ತಂಡ ಶಸ್ತ್ರಚಿಕಿತ್ಸಾ ರಹಿತ ತಂತ್ರಜ್ಞಾನದ ಮೂಲಕ ಕ್ಯಾಥ್ ಲ್ಯಾಬ್‌ನಲ್ಲಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ ಎಂದರು.

ಎಲೆಕ್ಟ್ರೋಫಿಸಿಯಾಲಜಿಸ್ಟ್ ಡಾ. ಯಾಜ್ನಿಕ್ ಮುಕುಂದ್ ಅವರು ವಿಶೇಷವಾದ ಪೇಸ್ ಮೇಕರ್ ಹೊರತೆಗೆಯುವ ತಂತ್ರಜ್ಞಾನವನ್ನು ಬಳಸಿ ಯಾವುದೇ ತೊಡಕು ಇಲ್ಲದೇ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ಅರಿವಳಿಕೆಯಲ್ಲಿ ಡಾ. ಮೇಘನಾ ಮುಕುಂದ್ ಅವರು ಸಹಕರಿಸಿದ್ದಾರೆ. ಈಗ ರೋಗಿಯು ಆರೋಗ್ಯವಂತರಾಗಿ ಗುಣಮುಖರಾಗಿದ್ದು, ದೀರ್ಘಕಾಲದ ಅನಾರೋಗ್ಯದಿಂದ ಗುಣಮುಖರಾಗಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಲೆಕ್ಟ್ರೋಫಿಸಿಯಾಲಜಿಸ್ಟ್ ಡಾ. ಯಾಜ್ನಿಕ್ ಮುಕುಂದ್, ಅರಿವಳಿಕೆ ತಜ್ಞೆ ಡಾ. ಮೇಘನಾ ಮುಕುಂದ್, ಭಾರಧ್ವಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News