×
Ad

ಮಂಗಳೂರು: ಬ್ಯಾಂಕ್ ಖಾತೆಯಿಂದ 72.86 ಲಕ್ಷ ರೂ. ವಂಚನೆ

Update: 2023-11-06 22:50 IST

ಮಂಗಳೂರು, ನ.6: ವ್ಯಕ್ತಿಯೊಬ್ಬರನ್ನು ಅಪರಿಚಿತ ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕ ಸಾಧಿಸಿದ ವಂಚಕರು ವ್ಯಕ್ತಿಯೊಬ್ಬರಿಗೆ ಲಾಟರಿ ಹಣ ಬಂದಿರುವುದಾಗಿ ಹೇಳಿ ಆ ಬಳಿಕ ವ್ಯಕ್ತಿಯ ಖಾತೆಯಿಂದ ಹಂತ ಹಂತವಾಗಿ 72.86 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಸತ್ಯಂ ಪಾಂಡೆ ಮತ್ತು ಮಿತ್ತಲ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡ ಅಪರಿಚಿತರಿಬ್ಬರು ವಾಟ್ಸ್‌ಆ್ಯಪ್ ಮೂಲಕ ತನ್ನೊಂದಿಗೆ ಮಾತನಾಡಿ ನಿರಂತರವಾಗಿ ಸಂಪರ್ಕದಲ್ಲಿದ್ದರು. ಒಂದು ದಿನ ತನಗೆ ಲಾಟರಿ ಹಣ ಬಂದಿರುವುದಾಗಿ ಹೇಳಿ ಆ ಹಣವನ್ನು ಖಾತೆಗೆ ಜಮಾ ಮಾಡುವುದಾಗಿ ತಿಳಿಸಿ ಒಂದು ಮೊಬೈಲ್ ನಂಬರ್ ನೀಡಿ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡುವಂತೆ ತಿಳಿಸಿದ್ದರು. ಅದನ್ನು ನಂಬಿದ ತಾನು ಅದರಂತೆ ಲಿಂಕ್ ಮಾಡಿದ್ದೆ. ಬಳಿಕ ಅಪರಿಚಿತರು ತನ್ನ ಗಮನಕ್ಕೆ ತಾರದೆ ಅ.26ರಿಂದ ನ.2ರ ಮಧ್ಯೆ 72,86,916 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿ ವಂಚಿಸಿದ್ದಾರೆ ಎಂದು ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News