×
Ad

ಮಂಗಳೂರು | ಲೂರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ಹಿರಿಯರ ದಿನಾಚರಣೆ

Update: 2025-09-04 15:11 IST

ಮಂಗಳೂರು, ಸೆ.4: ಲೂರ್ಡ್ಸ್ ಸೆಂಟ್ರಲ್ ಶಾಲೆ, ಮಂಗಳೂರು, ಕಿಂಡ ಗಾರ್ಡನ್ ವಿಭಾಗದ ಆಶ್ರಯದಲ್ಲಿ ಸೆ. 2ರಂದು ಬಿಜೈ ಚರ್ಚ್ ಹಾಲ್‌ನಲ್ಲಿ ಅಜ್ಜ ಅಜ್ಜಿಯಂದಿರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಮ್ಯಾನೇಜರ್ ಡಾ.ಜಾನ್ ಬಾಪ್ಟಿಸ್ಟ್ ಸಲ್ದಾನ್ಹಾ, ಪ್ರಾಂಶುಪಾಲ ಫಾ.ಜಾನ್ಸನ್ ಎಲ್ ಸಿಕ್ವೇರಾ, ಉಪಪ್ರಾಂಶುಪಾಲೆ ಅನಿತಾ ಥೋಮಸ್ ಹಾಗೂ ಮುಖ್ಯ ಅತಿಥಿ ಜಾರ್ಜ್ ಡಿಸೋಜ ಮತ್ತು ಲೀನಾ ಡಿಸೋಜ ಉಪಸ್ಥಿತರಿದ್ದರು.

ಮಕ್ಕಳಿಂದ ಪ್ರಾರ್ಥನಾ ಗೀತೆ, ನೃತ್ಯ, ಹಾಡುಗಳು ಮತ್ತು ನಾಟಕಗಳ ಪ್ರದರ್ಶನ ನಡೆಯಿತು. ಮಕ್ಕಳೊಂದಿಗೆ ವೃದ್ಧರೂ ಪಾಲ್ಗೊಂಡ ವಿಶಿಷ್ಟ ನೃತ್ಯ ಪ್ರದರ್ಶನ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಆಗಿತ್ತು. ಮುಖ್ಯ ಅತಿಥಿಗಳು ಶಾಲೆಯ ಪ್ರಯತ್ನವನ್ನು ಶ್ಲಾಘಿಸಿ, ಹಿರಿಯರ ಪಾತ್ರದ ಮಹತ್ವವನ್ನು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News