×
Ad

ಮಂಗಳೂರು: ಟೆಂಪೋ ಟ್ರಾವೆಲರ್ ಕಳವು ಪ್ರಕರಣ; ಮೂವರ ಬಂಧನ

Update: 2023-09-22 22:32 IST

ಮಂಗಳೂರು, ಸೆ.22: ನಗರದ ಕುಂಟಿಕಾನ ಫ್ಲೈಓವರ್ ಬಳಿ ಪಾರ್ಕ್ ಮಾಡಲಾಗಿದ್ದ ಟೆಂಪೋ ಟ್ರಾವೆಲರ್ ವಾಹನವನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಬಂಧಿತರನ್ನು ಹೊರ ರಾಜ್ಯದ ಅರೀಫ್ ಉಲ್ಲಾಖಾನ್, ಅಮಿತ್ ಬಾಹುಬಲಿ ಪಂಚೋಡಿ ಯಾನೆ ಬೇಬಿ, ಸುರೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಸುಮಾರು 15 ಲಕ್ಷ ರೂ. ಮೌಲ್ಯದ ಟೆಂಪೋ ಟ್ರಾವೆಲ್ಲೆರ್‌ನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

ಸೆ.14ರಾತ್ರಿ 8:30ಕ್ಕೆ ಈ ವಾಹನವನ್ನು ಕುಂಟಿಕಾನ ಫ್ಲೈಓವರ್ ಬಳಿ ಪಾರ್ಕ್ ಮಾಡಲಾಗಿತ್ತು. ಮರುದಿನ ಬೆಳಗ್ಗೆ ನೋಡಿದಾಗ ಇದು ಕಳವಾಗಿತ್ತು. ಈ ಬಗ್ಗೆ ಉರ್ವ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್‌ರ ನಿರ್ದೇಶನದ ಮೇರೆಗೆ ಉರ್ವ ಠಾಣಾ ನಿರೀಕ್ಷಕಿ ಭಾರತಿ ಜಿ. ನೇತೃತ್ವದಲ್ಲಿ ರಚಿಸಲಾದ ವಿಶೇಷ ತಂಡದಲ್ಲಿದ್ದ ಎಸ್ಸೈ ಹರೀಶ್ ಎಚ್‌ವಿ, ಎಸ್ಸೈಗಳಾದ ವಿನಯ್ ಕುಮಾರ್, ಉಲ್ಲಾಸ್ ಮಹಾಲೆ, ಸಿಬ್ಬಂದಿಗಳಾದ ಗಿರೀಶ್, ಭಾಸ್ಕರ್, ಅಭಿಷೇಕ್, ಪ್ರಜ್ವಲ್ ಆರೋಪಿಗಳನ್ನು ಬೆಳಗಾವಿಯಲ್ಲಿ ಬಂಧಿಸಿ ಕಳವಾದ ವಾಹನ ವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News