×
Ad

ಮಂಗಳೂರು: ವಾಷಿಂಗ್ ಮೆಷಿನ್ ರಿಪೇರಿಗೆ ಹೋದ ಟೆಕ್ನೀಶಿಯನ್‌ಗೆ ಹಲ್ಲೆ; ಪ್ರಕರಣ ದಾಖಲು

Update: 2023-07-17 22:28 IST

ಮಂಗಳೂರು, ಜು.17: ವಾಷಿಂಗ್ ಮೆಷಿನ್ ದುರಸ್ತಿಗೆ ಹೋದ ಟೆಕ್ನೀಶಿಯನ್‌ಗೆ ಹಲ್ಲೆ ನಡೆಸಿದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆತ್ತಿಕಲ್ಲಿನ ಸುಚಿತ್ರಾ ವಾಷಿಂಗ್ ಮೆಷಿನ್ ಕೆಟ್ಟು ಹೋಗಿರುವ ಬಗ್ಗೆ ಕಂಪೆನಿಗೆ ದೂರು ನೀಡಿದ್ದರು. ಅದರಂತೆ ಎಲ್‌ಜಿ ಕಂಪೆನಿಯ ಸರ್ವಿಸ್ ಸೆಂಟರ್‌ನಲ್ಲಿ ಟೆಕ್ನೀಶಿಯನ್ ಆಗಿರುವ ಕೇಶವ ಎಂಬವರು ಆ ಮನೆಗೆ ಹೋಗಿ ಪರಿಶೀಲಿಸಿದಾಗ ವಯರ್ ಮತ್ತು ಪೈಪ್‌ನ್ನು ಇಲಿ ತುಂಡು ಮಾಡಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ.

ಕಂಪೆನಿಯವರೇ ರಿಪೇರಿ ಮಾಡುವಂತೆ ಮನೆ ಮಂದಿ ತಿಳಿಸಿದ ಮೇರೆಗೆ ಕೇಶವ ರವಿವಾರ ಮಧ್ಯಾಹ್ನ ಸಾಮಗ್ರಿಗಳನ್ನು ತೆಗೆದುಕೊಂಡು ಸುಚಿತ್ರಾರ ಮನೆಗೆ ಹೋದಾಗ ಒಂದು ಪಾರ್ಟ್ ವಾಷಿಂಗ್ ಮೆಷಿನ್‌ಗೆ ಸರಿ ಹೊಂದದ ಕಾರಣ ಮರುದಿನ ಹಾಕುವುದಾಗಿ ತಿಳಿಸಿದರು ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಸುಚಿತ್ರಾರ ಮನೆಯಲ್ಲಿದ್ದ ಆರೋಪಿಯು ಕೇಶವರಿಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News