×
Ad

ಝಕರಿಯಾ ಹಾಜಿ ಜೋಕಟ್ಟೆ ಅವರಿಗೆ 'ಖ್ವಾಜಾ ಗರೀಬ್ ನವಾಝ್ ಪ್ರಶಸ್ತಿ'

Update: 2025-12-26 12:29 IST

ಬಂಟ್ವಾಳ: ದಾರುಲ್ ಇರ್ಶಾದ್ ಅಧೀನದ ಕೆ.ಜಿ.ಎನ್. ದ‌ಅವಾ ಕಾಲೇಜು ಮಿತ್ತೂರಿನಲ್ಲಿ ಬೃಹತ್ ಅಜ್ಮೀರ್ ಮೌಲಿದ್ ಮತ್ತು ಸನದುದಾನ ಸಮಾರಂಭ ಇಂದು ನಡೆಯಲಿದೆ. ಪ್ರಸ್ತುತ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಝಕರಿಯಾ ಹಾಜಿ ಜೋಕಟ್ಟೆ ಅವರಿಗೆ 'ಖ್ವಾಜಾ ಗರೀಬ್ ನವಾಝ್ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಗುತ್ತದೆ.

ಕೇರಳ ಮುಸ್ಲಿಮ್ ಜಮಾ‌ಅತ್ ಪ್ರಧಾನ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸಾದಾತ್ ಖಲೀಲುಲ್ ಬುಖಾರಿ ತಂಙಳ್, ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾ ಕಾರ್ಯದರ್ಶಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಕರ್ನಾಟಕ ಜಮ್ಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ‌ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News