×
Ad

ಕಿನ್ನಿಗೋಳಿ: 60ನೇ ವರ್ಷದ ಸಾರ್ವಜನಿಕ ಕ್ರಿಸ್‌ಮಸ್ ಸಂಭ್ರಮ

Update: 2025-12-26 15:13 IST

ಕಿನ್ನಿಗೋಳಿ: ಇಲ್ಲಿನ ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ನೇತೃತ್ವದಲ್ಲಿ ಮಂಗಳೂರು ಉತ್ತರ ವಲಯದ ಸ್ಥಳೀಯ 7 ಚರ್ಚ್ ಗಳು, ಕೊಸೆಸಮ್ಮನವರ ಚರ್ಚ್ ಕಿನ್ನಿಗೋಳಿ, ಜ್ಯೋತಿ ಮಹಿಳಾ ಮಂಡಳಿ, ಧರ್ಮಸ್ಥಳ ಸ್ವ-ಸಹಾಯ ಸಂಘ, ರಾಕ್ ಗೈಸ್ ಪದ್ಮನೂರು ಇವರುಗಳ ಸಹಯೋಗದೊಂದಿಗೆ 60ನೇ ವರ್ಷದ ಸಾರ್ವಜನಿಕ ಕ್ರಿಸ್‌ಮಸ್ ಸಂಭ್ರಮವು ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಭಾಂಗಣ ಗುರುವಾರ ರಾತ್ರಿ ನಡೆಯಿತು.

ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ಅಧ್ಯಕ್ಷ ಪ್ರಕಾಶ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾಮ್ಸ್ ಸಲ್ದಾನಾ, ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ, ಅಸ್ಪಯ್ಯದ್ ಅಬ್ದುಲ್ ರೆಹಮಾನ್, ಸಾದತ್ ಬಾಅಲವಿ ತಂಙಳ್‌ ಉಪಸ್ಥಿತರಿದ್ದು ಕ್ರಿಸ್ಮಸ್ ಸೌಹಾರ್ದ ಸಂದೇಶ ನೀಡಿದರು‌.

ಇದೇ ಸಂದರ್ಭ ಎನ್‌ಐಟಿಕೆ ನೌಕರರ ಸಂಘದ ಮಾಜಿ ಅಧ್ಯಕ್ಷ ದಾಮೋದರ ಕೆ. ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮಯ್ಯದ್ದಿ, ಆಂಬ್ಯುಲೆನ್ಸ್ ಚಾಲಕಕರಾದ ಆಲ್ವಿನ್ ಸುವಾರಿಸ್, ಡಾಕ್ಟರೇಟ್ ಪದವಿ ಪುರಸ್ಕೃತರಾದ ಡಾ. ವನಿತಾ ಶೆಟ್ಟಿ, ರಾಷ್ಟ್ರೀಯ ಪವರ್ ಲಿಸ್ಟರ್ ಸಿಂಥಿಯಾ ಕುಟಿನ್ಹಾ, ರ್ಯಾಂಕ್ ವಿಜೇತ ರೋಹಿತ್ ಪೂಜಾರಿ ಮೊದಲಾದವರನ್ನು ಸನ್ಮಾಸಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮಂಗಳೂರು ಉತ್ತರ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂ‌.ಫಾ. ಓಸ್ವಾಲ್ಡ್ ಮೊಂತೆರೊ, ಕಿನ್ನಿಗೋಳಿ ಕೊಸೆಸಮ್ಮನವರ ಧರ್ಮಕೇಂದ್ರ ವಂದನೀಯ ಫಾ. ಜೋಕಿಂ ಫೆರ್ನಾಂಡಿಸ್, ದಾಯ್ದಿವರ್ಲ್ಡ್ ಮೀಡಿಯಾ ಫ್ರೈ.ಲಿ. ಸಂಸ್ಥಾಪಕ ವಾಲ್ಟರ್ ನಂದಳಿಕೆ, ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಪ್ರಕಾಶ್ ಡಿಸೋಜ, ಉಪಾಧ್ಯಕ್ಷ ದಾಮೋದರ ಶೆಟ್ಟಿ, ಗೌರವಾಧ್ಯಕ್ಷ ಜೋಸೆಫ್ ಕ್ವಾಡ್ರಸ್, ಕಾವ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ವಸಂತ್ ಶೆಟ್ಟಿಗಾರ್, ಸಂಚಾಲಕರಾದ ಸರಿತಾ ಕೋಟ್ಯಾನ್, ಸ್ವಾಗತ ಸಮಿತಿಯ ಸಂಚಾಲಕ ಹೆರಿಕ್ ಪಾಯಸ್, ಮೆರವಣಿಗೆ ಸಮಿತಿ ಸಂಚಾಲಕ ಶೇಖರ ಪೂಜಾರಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ನವೀನ್‌ ಡಿಕೋಸ್ತ, ಹಣಕಾಸು ಸಮಿತಿ ಸಂಚಾಲಕ ಸಿಪ್ರಿಯನ್ ಡಿಸೋಜ, ಸಹ ಭೋಜನ‌ ಸಮಿತಿ ಸಂಚಾಲಕ ರವಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಸಭಾ‌ಕಾರ್ಯಕ್ರಮದ ಬಳಿಕ ಸಹಭೋಜನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.‌ ಸಭಾ ಕಾರ್ಯಕ್ರಮಕ್ಕೂ ಮುನ್ನ ಕಿನ್ನಿಗೋಳಿ ಚರ್ಚ್ ಬಳಿಯಿಂದ ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ವರೆಗೆ ಸೌಹಾರ್ದ ಮೆರವಣಿಗೆ ನಡೆಯಿತು‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News