×
Ad

ಮಂಗಳೂರು | ಮೇಲ್ತೆನೆಯ ದಶಮಾನೋತ್ಸವದ ಸಂಚಿಕೆ ಬಿಡುಗಡೆ

Update: 2025-12-26 19:21 IST

ಮಂಗಳೂರು, ಡಿ.26: ಮೇಲ್ತೆನೆ (ಬ್ಯಾರಿ ಎಲ್ತ್‌ಗಾರ್-ಕಲಾವಿದಮಾರೊ ಕೂಟ) ದೇರಲಕಟ್ಟೆ-ಉಳ್ಳಾಲ ತಾಲೂಕು ಇದರ ಹತ್ತನೆ ವರ್ಷದ ನೆನಪಿನ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ಶುಕ್ರವಾರ ದೇರಳಕಟ್ಟೆಯಲ್ಲಿ ನಡೆಯಿತು.

ಮುಡಿಪು ಸರಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹೈದರಾಲಿ ನೆನಪಿನ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬ್ಯಾರಿ ಭಾಷೆ, ಜನಾಂಗ, ಸಮುದಾಯ, ಅಸ್ಮಿತೆಯ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಯಬೇಕು. ಸಾಹಿತ್ಯದಲ್ಲಿ ಬ್ಯಾರಿ ಮುಸ್ಲಿಂ ಸಂವೇದನೆಗೆ ಒತ್ತು ನೀಡಬೇಕು ಎಂದರು.

ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೇಲ್ತೆನೆಯ ಅಧ್ಯಕ್ಷ ವಿ. ಇಬ್ರಾಹಿಂ ನಡುಪದವು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಬೆಳ್ಮ ಗ್ರಾಪಂ ಮಾಜಿ ಅಧ್ಯಕ್ಷ ಯೂಸುಫ್ ಭಾಗವಹಿಸಿದ್ದರು. ಮೇಲ್ತೆನೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಚಿಕೆಯ ಸಂಪಾದಕ ಹಂಝ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ಇಬ್ರಾಹೀಂ ಮುದುಂಗಾರುಕಟ್ಟೆ ಸ್ವಾಗತಿಸಿದರು. ಯೂಸುಫ್ ವಕ್ತಾರ್ ವಂದಿಸಿದರು. ಟಿ. ಇಸ್ಮಾಯಿಲ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ಮೇಲ್ತೆನೆಯ ಬಶೀರ್ ಅಹ್ಮದ್ ಕಿನ್ಯ, ಸಿದ್ದೀಕ್ ಎಸ್. ರಾಝ್, ಮುಹಮ್ಮದ್ ಬಾಷಾ ನಾಟೆಕಲ್, ಬಶೀರ್ ಕಲ್ಕಟ್ಟ, ಅಶೀರುದ್ದೀನ್ ಸಾರ್ತಬೈಲ್, ಸಿ.ಎಂ.ಶರೀಫ್ ಪಟ್ಟೋರಿ, ಅಬೂಬಕರ್ ಎಚ್.ಕಲ್‌., ಲೇಖಕ ಇಸ್ಮತ್ ಪಜೀರ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News