×
Ad

ಮಂಗಳೂರು: ಉದ್ಯೋಗಿಗಳ ಮೇಲೆ ಅನೈತಿಕ ಪೊಲೀಸ್‌ಗಿರಿ; ದೂರು ದಾಖಲು

Update: 2023-11-27 23:17 IST

ಮಂಗಳೂರು, ನ.27: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಅಂಗಡಿಯೊಂದರ ಇಬ್ಬರು‌ ಉದ್ಯೋಗಿಗಳ ಮೇಲೆ ಅನೈತಿಕ ಪೊಲೀಸ್‌ಗಿರಿ ಎಸಗಿದ ಘಟನೆ ಇಂದು ರಾತ್ರಿ ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇಂದು ರಾತ್ರಿ ಸುಮಾರು 8 ಗಂಟೆಗೆ ನಗರದ ಮುಳಿಹಿತ್ಲು ಎಂಬಲ್ಲಿನ ಸ್ಪೋರ್ಟ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೂರುಲ್ಲಾ ಅಮೀನ್ ಮತ್ತು ಸೌಜನ್ಯಾ ಎಂಬವರು ಮೊಬೈಲ್ ರಿಪೇರ್ ಮಾಡಿಸಿಕೊಂಡು ನಗರದ ಮಿಲಾಗ್ರಿಸ್ ಚರ್ಚ್ ಕಡೆಯಿಂದ ಭಗಿನಿ ಸಮಾಜದ ಕಡೆಗೆ ಬೈಕ್ ನಲ್ಲಿ ತೆರಳುವಾಗ ಇಬ್ಬರು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಉದ್ಯೋಗಿಗಳನ್ನು ತಡೆದು "ನೀವು ಹಿಂದೂ -ಮುಸ್ಲಿಮ್ ಎಲ್ಲಿಗೆ ಹೋಗುತ್ತಿದ್ದೀರಿ?" ಎಂದು ಪ್ರಶ್ನಿಸಿ ಅನೈತಿಕ ಪೊಲೀಸ್‌ಗಿರಿ ನಡೆಸಿದ್ದಾರೆ ಎನ್ನಲಾಗಿದೆ. ಅಷ್ಟರಲ್ಲಿ ಹೊಯ್ಸಳ ವಾಹನದ ಪೊಲೀಸರು ಇಬ್ಬರು ಉದ್ಯೋಗಿಗಳನ್ನು ರಕ್ಷಣೆ ಮಾಡಿ ಠಾಣೆಗೆ ಕರೆ ತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News