×
Ad

ಮಂಗಳೂರು: ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಯುವಕನ ಸೆರೆ

Update: 2024-02-01 15:50 IST

ಮಂಗಳೂರು, ಫೆ.1: ಮಾದಕ ವಸ್ತು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಇಂದು ಮಂಗಳೂರು ಉತ್ತರ ಉಪ ವಿಭಾಗದ ಡ್ರಗ್ಸ್ ಸ್ಕ್ವಾಡ್ ಸಿಬ್ಬಂದಿ ಹಾಗೂ ಕಾವೂರು ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮುಹಮ್ಮದ್ ಫರಾಝ್ ಬಂಧಿತ ಆರೋಪಿ. ಈತ ನಗರದ ಮೇರಿಹೀಲ್ ಹೆಲಿಪ್ಯಾಡ್ ಬಳಿ ಇಂದು ಮಾದಕ ವಸ್ತುವಾದ ಮೆಥಾಂಫೆಟಮೈನ್ ಅಕ್ರಮವಾಗಿ ಮಾರಾಟಕ್ಕೆ ಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನಿಂದ ಸುಮಾರು 30 ಸಾವಿರ ರೂ. ಮೌಲ್ಯದ 7.28 ಗ್ರಾಂನಷ್ಟು ಮೆಥಾಂಫೆಟಮೈನ್ ದ್ವಿಚಕ್ರ ವಾಹನವೊಂದನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News