ಮಂಗಳೂರು | ಡಿ.6ರಂದು ಭಾಸ್ಕರಾಭಿನಂದನ ಕಾರ್ಯಕ್ರಮ
ಮಂಗಳೂರು, ಡಿ.4: ಸಹಕಾರ, ತುಳುನಾಡಿನ ಜಾನಪದ ಕ್ರೀಡೆ ಕಂಬಳ, ಕೃಷಿ, ಧಾರ್ಮಿಕ , ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಸಹಕಾರ ರತ್ನ ಕೊಳಕೆ ಇರ್ವತ್ತೂರು ಭಾಸ್ಕರ್ ಎಸ್. ಕೋಟ್ಯಾನ್ರಿಗೆ ಕರ್ನಾಟಕ ಸರಕಾರದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ-2025 ಲಭಿಸಿರುವ ಹಿನ್ನಲೆಯಲ್ಲಿ ಅವರ ಅಭಿಮಾನಿ ಬಳಗದಿಂದ ನಾಗರಿಕ ನಾಗರಿಕ ಪೌರ ಸನ್ಮಾನ ‘ಭಾಸ್ಕರಾಭಿನಂದನ ಕಾರ್ಯಕ್ರಮ’ ಡಿ.6ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಭಾಸ್ಕರಾಭಿನಂದನಾ ಸಮಿತಿಯ ಸಂಚಾಲಕ ಚಿತ್ತರಂಜನ್ ಬೋಳಾರ್ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸೊಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಮಾಜಿ ಸಚಿವ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ. ಸಂಸದ ಕ್ಯಾ ಬ್ರಿಜೇಶ್ ಚೌಟ ದ್ವೀಪ ಪ್ರಜ್ವಲನೆ ಮಾಡಲಿರುವರು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಭಾಸ್ಕರಾಭಿನಂದನ ಸನ್ಮಾನ ನೆರವೇರಿಸುವರು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಸಂಚಾಲಕ ಸದಾನಂದ ಪೂಜಾರಿ, ಸಂಚಾಲಕರಾದ ಕೆ.ಟಿ. ಸುವರ್ಣ, ಅವಿನಾಶ್ ಸುವರ್ಣ, ನಿಶಾನ್ ಪೂಜಾರಿ, ಸುಧಾಕರ ಕರ್ಕೆರ ಮತ್ತು ಸಂತೋಷ್ ಬಂಗೇರ ಉಪಸ್ಥಿತರಿದ್ದರು.