ಮಂಗಳೂರು | ಹಣ ಹೂಡಿಕೆ ಹೆಸರಿನಲ್ಲಿ ವಂಚನೆ: ಪ್ರಕರಣ ದಾಖಲು
ಮಂಗಳೂರು,ಡಿ.11: ಹಣವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಇನ್‍ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿ ಹೇಳಿದ್ದನ್ನು ನಂಬಿ ತಾನು 7.37 ಲಕ್ಷ ರೂ. ಕಳೆದುಕೊಂಡಿರುವುದಾಗಿ ವಂಚನೆಗೊಳಗಾದವರು ಸೆನ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
2023ರಲ್ಲಿ ಇನ್‍ಸ್ಟಾಗ್ರಾಂ ಮೂಲಕ ಮುಹಮ್ಮದ್ ಫೈಝಾನ್ ಎಂಬಾತನ ಪರಿಚಯವಾಗಿತ್ತು. ಆತ ಆನ್ಲೈನ್ನಲ್ಲಿ ಹಣ ಹೂಡಿಕೆ ಮಾಡಿದರೆ 2-3 ವರ್ಷದಲ್ಲಿ ಹೂಡಿಕೆ ಮಾಡಿದ ಹಣದೊಂದಿಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ತಿಳಿಸಿದ್ದ. ಅದನ್ನು ನಂಬಿ ತಾನು ಮತ್ತು ತನ್ನ ತಂದೆಯ ಖಾತೆಯಿಂದ 2023ರ ಮಾ.3ರಿಂದ ಮೇ 15ರವರೆಗೆ ಹಂತ ಹಂತವಾಗಿ 5.30 ಲಕ್ಷ ರೂ. ವರ್ಗಾಯಿಸಿದ್ದೆವು. ಬಳಿಕ ತನ್ನ ಸ್ನೇಹಿತ ಕೂಡಾ 2023ರ ಫೆ.15ರಿಂದ 19ರವರೆಗೆ 2.07 ಲಕ್ಷ ರೂ. ವರ್ಗಾಯಿಸಿದ್ದ. 2026ಕ್ಕೆ ಹೂಡಿಕೆ ಮಾಡಿದ ಹಣದ ಮೆಚ್ಯೂರಿಟಿ ಹತ್ತಿರವಾಗುತ್ತಿರವ ಹಿನ್ನೆಲೆಯಲ್ಲಿ ಫೈಝಾನ್ ಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇನ್‍ಸ್ಟಾಗ್ರಾಂ ಖಾತೆಯೂ ಬ್ಲಾಕ್ ಆಗಿರುವ ಕಾರಣ ಆತ ವಂಚಿಸಿರುವ ಬಗ್ಗೆ ಸಂಶಯವಾಗಿದೆ ಎಂದು ತಿಳಿಸಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.