ವಿಟ್ಲ | ಡಿ.14ರಂದು ದುಲ್ ಫುಖಾರ್ ಸೇವಾ ಟ್ರಸ್ಟ್ ಕನ್ಮಾನ ಬೆಳ್ಳಿಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ
Update: 2025-12-11 16:33 IST
ವಿಟ್ಲ : ಬಡ ಮತ್ತು ಅನಾಥರ ಸೇವೆಯ ಗುರಿಯೊಂದಿಗೆ ಜನ್ಮ ತೆತ್ತು ಹುಟ್ಟು ದ್ಯೇಯದಲ್ಲಿ ಮುನ್ನಡೆಯುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದುಲ್ ಫುಖಾರ್ ಸೇವಾ ಟ್ರಸ್ಟ್ ಚೆಡವು ಕನ್ಯಾನ ಇದರ ಸಿಲ್ವರ್ ಜ್ಯುಬಿಲಿ ಮಹಾ ಸಮ್ಮೇಳನ ಡಿ.24 ಮತ್ತು 25 ರಂದು ಕನ್ಯಾನ ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯಲಿದ್ದು, ಇದರ ಪ್ರಯುಕ್ತ ಡಿ.14ರಂದು ರಕ್ತದಾನ ಶಿಬಿರ ನಡೆಯಲಿದೆ.
ಆ ಪ್ರಯುಕ್ತ ಹಮ್ಮಿಕೊಂಡ ಹಲವು ಯೋಜನೆಗಳಲ್ಲೊಂದಾದ ರಕ್ತದಾನ ಶಿಬಿರವು ಮಂಗಳೂರು ಎ.ಜೆ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಡಿ.14ರ ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿಂದ ಕನ್ಯಾನ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ
ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ