×
Ad

ಮಂಗಳೂರು | ಎಂಆರ್‌ಪಿಎಲ್‌ನಲ್ಲಿ ಸಂವಿಧಾನ ದಿನಾಚರಣೆ

Update: 2025-11-28 18:18 IST

ಮಂಗಳೂರು, ನ.28: ಎಂಆರ್‌ಪಿಎಲ್‌ನ ಕಾನೂನು ವಿಭಾಗದ ವತಿಯಿಂದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಮತ್ತು ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷ ಎನ್.ಕೆ.ಸುಧೀಂದ್ರ ರಾವ್ ಮಾತನಾಡಿ, ಮೂಲಭೂತ ಹಕ್ಕುಗಳ ರಕ್ಷಣೆಯಲ್ಲಿ ಸುಪ್ರೀಂ ಕೋರ್ಟ್ ನ ಮಹತ್ವವನ್ನು ವಿವರಿಸಿದರು. ನಾಗರಿಕರು ತಮ್ಮ ಮೂಲಭೂತ ಕರ್ತವ್ಯಗಳನ್ನು ಪೂರೈಸಿದರೆ ಮಾತ್ರ ಈ ಹಕ್ಕುಗಳು ಅರ್ಥಪೂರ್ಣವಾಗಲು ಸಾಧ್ಯ ಎಂದವರು ಹೇಳಿದರು.

ಈ ಸಂದರ್ಭ ನ್ಯಾ. ಸುಧೀಂದ್ರ ರಾವ್ ಅವರು, ಎಂಆರ್‌ಪಿಎಲ್‌ನ ಕಾನೂನು ತಂಡವು ಸಂಗ್ರಹಿಸಿದ ಎರಡು ಕಾನೂನು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂಆರ್‌ಪಿಎಲ್‌ (ರಿಫೈನರಿ) ನಿರ್ದೇಶಕ ನಂದಕುಮಾರ್ ವಿ. ಪಿಳ್ಳೈ, ಭಾರತೀಯ ಸಂವಿಧಾನವು ಜಗತ್ತಿನ ಅತ್ಯುತ್ತಮ ಅಭ್ಯಾಸಗಳಿಂದ ಪ್ರೇರಿತವಾದ ಜೀವಂತ ದಾಖಲೆ ಎಂದು ಬಣ್ಣಿಸಿದರು.

ಹಿರಿಯ ಅಧಿಕಾರಿ ಗಣೇಶ್ ಎಸ್. ಭಟ್ ಸೇರಿದಂತೆ ಇತರ ಅಧಿಕಾರಿಗಳು, ನೌಕರರು ಭಾಗವಹಿಸಿದ್ದರು. ಜಿಜಿಎಂ (ಎಚ್ಆರ್) ಕೃಷ್ಣ ಹೆಗಡೆ ಮಿಯಾರ್ ಸ್ವಾಗತಿಸಿ, ಸಂವಿಧಾನದಲ್ಲಿ ಪ್ರತಿಪಾದಿಸಲಾದ ಪ್ರಮುಖ ಅಂಶಗಳ ಬಗ್ಗೆ ಮಾತನಾಡಿದರು.

ಸಂವಿಧಾನ ಪೀಠಿಕೆಯನ್ನು ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಜಿಜಿಎಂ (ಟಿಎಸ್) ಸತ್ಯನಾರಾಯಣ ಎಚ್.ಸಿ., ಇಡಿ (ಮಾರುಕಟ್ಟೆ ಮತ್ತು ಎಎಂಪಿ, ಬಿಡಿ) ದೀಪಕ್ ಪ್ರಭಾಕರ್ ಪಿ., ಇಡಿ (ರಿಫೈನರಿ) ಎನ್. ಆನಂದ ಕುಮಾರ್ ಅವರು ಓದಿದರು.

ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಲಾದ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜಿಎಂ (ಕಾನೂನು) ಪ್ರಫುಲ್ ಮೋಹನ್ ವಂದಿಸಿದರು. ಕವಿತಾ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News