ಮಂಗಳೂರು | ತಂತ್ರಾಂಶಗಳ ನಿರ್ವಹಣೆ, ಬಳಕೆ ಬಗ್ಗೆ ಜಿಲ್ಲಾಮಟ್ಟದ ಕಾರ್ಯಾಗಾರ
Update: 2025-12-15 18:15 IST
ಮಂಗಳೂರು,ಡಿ.15: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಸರಕಾರಿ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಇಎಸ್ಆರ್, ಎಚ್.ಆರ್.ಎಂ.ಎಸ್ - 2.0, ಕೆ-2 ತಂತ್ರಾಂಶಗಳ ನಿರ್ವಹಣೆ ಮತ್ತು ಬಳಕೆ ಕುರಿತು ಜಿಲ್ಲಾಮಟ್ಟದ ಕಾರ್ಯಾಗಾರ ಸೋಮವಾರ ನಗರದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಂದಿನಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಮಾತನಾಡಿ, ಸರಕಾರಿ ಕಚೇರಿಗಳಲ್ಲಿ ಲೆಕ್ಕ ಪತ್ರ ನಿರ್ವಹಣೆಗೆ ಅತ್ಯಾಧುನಿಕವಾದ ಈ ಸಾಫ್ಟ್ ವೇರನ್ನು ಸರಕಾರವು ಜಾರಿಗೊಳಿಸಿದೆ. ಈ ತಂತ್ರಾಂಶದ ಕಾರ್ಯಾಗಾರವನ್ನು ದ.ಕ ಜಿಲ್ಲೆಯ ಸರಕಾರಿ ನೌಕರರ ಸಂಘವು ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ದ.ಕ ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಎಂ.ಎಸ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಲತೇಶ್ ವಂದಿಸಿದರು. ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.