×
Ad

ಮಂಗಳೂರು | ಸಮಸ್ತ ಅಸ್ಮಿ ಆರ್ಟಲಿಯಾ ಕಿಡ್ಸ್ ಫೆಸ್ಟ್: ಅಡ್ಯಾರ್ ಅಲಿಫ್ ಸ್ಕೂಲ್ ಚಾಂಪಿಯನ್

Update: 2025-12-15 17:47 IST

ಮಂಗಳೂರು, ಡಿ.15:ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಅಂಗೀಕೃತ ಅಸ್ಮಿ (Association of Samastha Minority Institutions) ಸಮೂಹ ಸಂಸ್ಥೆಗಳ ಮಂಗಳೂರು ವಿಭಾಗದ ಕಿಡ್ಸ್ ಫೆಸ್ಟ್ ನಗರದ ಬೆಂದೂರಿನ ಖಾಸಗಿ ಹಾಲ್ ನಲ್ಲಿ ನಡೆಯಿತು.

ಕರ್ನಾಟಕದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಅಲ್ ಝಯ್ಯಾನ್ ಸ್ಕೂಲ್ ವಿದ್ಯಾರ್ಥಿನಿ ಫಾತಿಮ ನಫೀಸಾ ಸಿಮ್ರಾ ಪವಿತ್ರ ಕುರಾನಿನ ಫಾತಿಹ ಪಠಿಸುವ ಮೂಲಕ ಚಾಲನೆ ನೀಡಿದರು.

ಅಸ್ಮಿ ಜನರಲ್ ಕನ್ವಿನರ್ ಪಿ.ಕೆ ಮುಹಮ್ಮದ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂ ಎಜುಕೇಶನಲ್ ಇನ್ಸ್ಟಿಟ್ಯೂಟ್ ಆಫ್ ಫೆಡರೇಷನ್ ನ ಅಧ್ಯಕ್ಷ ಪಿ.ಮೂಸಬ್ಬ ಬ್ಯಾರಿ ಜೋಕಟ್ಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರೇರಣಾ ತರಬೇತುದಾರರಾಗಿ ಮುಹಮ್ಮದ್ ರಫೀಕ್ ಮಾಸ್ಟರ್ ಪಾಲ್ಗೊಂಡಿದ್ದರು. ಸಮಸ್ತ ಶಿಕ್ಷಣ ಮಂಡಳಿಯ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಅಸ್ಮಿಯ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಅಸ್ಮಿ ಡೈರೆಕ್ಟರ್ ಎಂ.ವಿ. ಅಬ್ದುಲ್ ಮಜೀದ್ ಪ್ರಾಸ್ತವಿಕವಾಗಿ ಮಾತಾಡಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ನ ಹೈದರ್ ಬಿತ್ತ್ಪಾದೆ, ಕಿನ್ಯ ರೇಂಜ್ ಮದ್ರಸ ಮ್ಯಾಮೇಜ್ಮೆಂಟ್ ಅಧ್ಯಕ್ಷ ಇಬ್ರಾಹಿಂ ಕೊಣಾಜೆ ಭಾಗವಹಿಸಿದ್ದರು.

ಅಬ್ದುಲ್ ಜಬ್ಬಾರ್, ಪಿಪಿಸಿ ಮುಹಮ್ಮದ್ ಕಕ್ಕಾವು, ಎಂ.ವಿ. ಅಬ್ದುಲ್ ಮಜೀದ್, ನಾಫಿ ಹುದವಿ, ಶಿಹಾಬುದ್ದೀನ್, ಶಹೀನ್ ಅಹ್ಮದ್, ಉನೈಸ್ ಫೈಝಿ, ಹಬೀಲ್ ಅಹ್ಮದ್ ದಾರಿಮಿ, ಮುಹಮ್ಮದ್ ಸಫ್ವಾನ್, ಅಬ್ದುಲ್ ಹಮೀದ್ (ಅಮ್ಮಿ), ಲೀಡ್ ಸ್ಕೂಲ್ ಮ್ಯಾನೇಜ್ಮೆಂಟ್ ಮುಕ್ತಾರ್ ಮುಸ್ತಫಾ, ಪ್ರಾಂಶುಪಾಲ ಝಬೀನ ಮತ್ತು ಅಲಿಫ್ ಸ್ಕೂಲ್ ಪ್ರಾಂಶುಪಾಲ ಸಬೀನ ವಿವಿಧ ಕಾರ್ಯಗಳನ್ನು ನಿರ್ವಹಿಸಿದರು.

ಅಸ್ಮಿ ಸಮೂಹ ಸಂಸ್ಥೆಗಳ ಕರ್ನಾಟಕ ರಾಜ್ಯ ಸಂಯೋಜಕ ಅಬ್ದುಲ್ ಹಮೀದ್ ಕಣ್ಣೂರು ಸ್ವಾಗತಿಸಿದರು. ಅಲ್ ಝಯ್ಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲ ಅಫ್ರಾ ವಂದಿಸಿದರು. ಝುಹರಾ ಅಂಜುಮ್ ಕಾರ್ಯಕ್ರಮ ನಿರೂಪಿಸಿದರು.

ಅಲಿಫ್ ಸ್ಕೂಲ್ ಬೋರುಗುಡ್ಡೆ ಚಾಂಪಿಯನ್

ಕಿಡ್ಸ್ ಫೆಸ್ಟ್ ನಲ್ಲಿ ಹನ್ನೆರಡು ವಿಷಯಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಅಲಿಫ್ ಇಸ್ಲಾಮಿಕ್ ಪ್ರಿ ಸ್ಕೂಲ್ ಬೋರುಗುಡ್ಡೆ ಕಣ್ಣೂರು ಪ್ರಥಮ, ಲೀಡ್ ಪ್ರಿ ಸ್ಕೂಲ್ ಉಳ್ಳಾಲ ದ್ವಿತೀಯ, ಅಲ್ ಝಯ್ಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ವೆಲೆನ್ಸಿಯ ತೃತೀಯ ಸ್ಥಾನವನ್ನು ಪಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News