×
Ad

ಸುಳ್ಯ | ಮೀಫ್ ವತಿಯಿಂದ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Update: 2025-12-15 17:49 IST

ಮಂಗಳೂರು, ಡಿ.15: ರಾಜ್ಯದ ಏಳು ಜಿಲ್ಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸುತ್ತಿರುವ ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ (ಮೀಫ್) ಮಂಗಳೂರು ಕೇಂದ್ರ ಕಚೇರಿ ಆಶ್ರಯದಲ್ಲಿ ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ, ಜಮೀಯ್ಯತ್ತುಲ್ ಫಲಾಹ್ ಸುಳ್ಯ ಘಟಕದ ಸಹಬಾಗಿತ್ವದಲ್ಲಿ ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸುಳ್ಯ ತಾಲೂಕಿನ 11 ಹೈಸ್ಕೂಲ್ ಗಳ 140 ವಿದ್ಯಾರ್ಥಿಗಳಿಗೆ 2 ದಿನಗಳ ಸುಳ್ಯ ತಾಲೂಕು ಮಟ್ಟದ ಎಸೆಸೆಲ್ಸಿ ಕಾರ್ಯಾಗಾರವನ್ನು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ. ಉದ್ಘಾಟಿಸಿದರು.

ಗ್ರೀನ್ ವ್ಯೂ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ ಅಧ್ಯಕ್ಷತೆ ವಹಿಸಿದ್ದರು. ಮೀಫ್ ಅಧ್ಯಕ್ಷ ವೂಸಬ್ಬ ಪಿ. ಬ್ಯಾರಿ ದಿಕ್ಸೂಚಿ ಭಾಷಣಗೈದರು. ಮೀಫ್ ಉಪಾಧ್ಯಕ್ಷ, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ, ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ.ಎಂ.ಎಸ್. ಮುಹಮ್ಮದ್, ಗ್ರೀನ್ ವ್ಯೂ ಪೂರ್ವಾಧ್ಯಕ್ಷ ಪಿ.ಎ.ಮುಹಮ್ಮದ್, ಸುಳ್ಯ ಅಲ್ಪಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಎಲಿಮಲೆ ಅತಿಥಿಗಳಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಮೀಫ್ ಪದಾಧಿಕಾರಿಗಳಾದ ಅನ್ವರ್ ಹುಸೈನ್ ಗೂಡಿನಬಳಿ, ಕಾರ್ಯಕ್ರಮ ಸಂಯೋಜಕ ಅಝೀಝ್ ಅಂಬರ್ ವ್ಯಾಲಿ, ಗ್ರೀನ್ ವ್ಯೂ ಪದಾಧಿಕಾರಿಗಳಾದ ಕೆ.ಎಸ್. ಉಮ್ಮರ್, ಶಾಫಿ ಕುತ್ತಾಮೊಟ್ಟೆ, ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಅಡ್ವೋಕೇಟ್ ಮೂಸ ಪೈಟಬಚಾಲ್, ಪದಾಧಿಕಾರಿಗಳಾದ ಹಸೈನಾರ್ ವಳಲಂಬೆ, ಅಬ್ದುಲ್ ಖಾದರ್ ಸಂಗಮ್, ಅಮೀರ್ ಕುಕ್ಕುಂಬಳ, ಎಸ್.ಪಿ. ಅಬೂಬಕ್ಕರ್ ಉಪಸ್ಥಿತರಿದ್ದರು,.

ಶಾಲಾ ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಟಣ ಸ್ವಾಗತಿಸಿದರು. ಶಿಕ್ಷಕ ರಂಜಿತ್ ವಂದಿಸಿದರು. ಶಿಕ್ಷಕಿ ಫಾತಿಮ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News