ಮಂಗಳೂರು | ಕೈಕಂಬ ಮೆಸ್ಕಾಂ ಉಪ ವಿಭಾಗ ಕಚೇರಿಯಲ್ಲಿ ಜನಸಂಪರ್ಕ ಸಭೆ
ಮಂಗಳೂರು, ಡಿ.15: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ(ನಿ) ಕೈಕಂಬ ಉಪವಿಭಾಗ ವ್ಯಾಪ್ತಿಯ ವಿದ್ಯುತ್ ಬಳಕೆದಾರರ ಜನಸಂಪರ್ಕ ಸಭೆಯು ಕೈಕಂಬ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಗುರುಪುರ ಗ್ರಾಪಂ ವ್ಯಾಪ್ತಿಯ ಅಡ್ಡೂರು ಗ್ರಾಮದ ಅಹ್ಮದ್ ಬಾವಾ ಅವರ ವಿಕಲಚೇತನ ಪುತ್ರಿಯ ಮನೆಗೆ ಮಾನವೀಯ ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಗುರುಪುರ ಗ್ರಾಪಂ ಮಾಜಿ ಸದಸ್ಯ ಟಿ. ಹನೀಫ್ ಮನವಿ ಮಾಡಿದರು.
ವಿಕಲಚೇತನ ಮಹಿಳೆಗೆ ಮಾನವೀಯ ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮೆಸ್ಕಾಂನಿಂದ ಪಂಚಾಯತ್ ಗೆ ಪತ್ರ ನೀಡಲಾಗುವುದು. ಆದರೆ ಅದಕ್ಕಿಂತ ಮುಂಚೆ, ಅರ್ಜಿಯಲ್ಲಿ ಮಹಿಳೆಗೆ ಸಂಬಂಧಿಸಿದ ಎಲ್ಲ ದಾಖಲೆ ಮೆಸ್ಕಾಂಗೆ ಒದಗಿಸಬೇಕು ಎಂದು ಜನಪಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್(ವಿ) ಎಸ್.ಇ. ಕೃಷ್ಣರಾಜ ಕೆ. ಭರವಸೆ ನೀಡಿದರು.
ಗಂಜಿಮಠ ಗ್ರಾಪಂ ಸದಸ್ಯ ಸುನಿಲ್ ಜಿ., ಕೆಡಿಬಿ ಮಾಜಿ ಸದಸ್ಯ ಜಿ. ಮುಹಮ್ಮದ್ ಉಂಞ, ವಿನಯ ರೈ, ಬಡಗ ಎಡಪದವಿನ ಮೋನಪ್ಪಗೌಡ ವಿವಿಧ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದರು.
ಕಾವೂರು ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಲೋಹಿತ್ ಬಿ.ಎಸ್., ಕೈಕಂಬ ಉಪ ವಿಭಾಗದ ಎಇಇ ಸುನಿಲ್ ಮೊಂತೆರೊ, ಕೈಕಂಬ ಎಇ ದೇವಿಪ್ರಸಾದ್, ಎಡಪದವು ಜೆಇ ವೀರಭದ್ರಪ್ಪ, ಮುಚ್ಚೂರು ಜೆಇ ಶಿವರಾಂ, ಎಇ (ತಾಂತ್ರಿಕ) ಮನು ಕೆ.ಎಸ್, ಕೈಕಂಬ ಮೆಸ್ಕಾಂ ಪ್ರಭಾರ ಲೆಕ್ಕ ಸಹಾಯಕಿ ಬೀನಾ ಎಸ್. ಡಿಸೋಜ ಮತ್ತಿತರರು ಪಾಲ್ಗೊಂಡಿದ್ದರು.