×
Ad

ಮಂಗಳೂರು | ದಸಂಸದಿಂದ ಡಾ. ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ

Update: 2025-12-15 21:57 IST

ಮಂಗಳೂರು, ಡಿ.15: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ ಮಂಗಳೂರು ತಾಲೂಕು ಶಾಖೆ ವತಿಯಿಂದ ಸಂವಿಧಾನ ಶಿಲ್ಪಿಭಾರತ ರತ್ನ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇಯ ಪರಿನಿಬ್ಬಾಣ ದಿನವನ್ನು ರವಿವಾರ ಆಚರಿಸಲಾಯಿತು.

ತಾಲೂಕು ಸಂಚಾಲಕರಾದ ರಾಘವೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಯ ಸಂಘಟನಾ ಸಂಚಾಲಕರಾದಂತ ದಲಿತ ನೌಕರರ ಒಕ್ಕೂಟದ ಉಸ್ತುವಾರಿ ಎಚ್.ಡಿ. ಲೋಹಿತ್ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಜಿಲ್ಲಾ ಸಂಘಟನಾ ಸಂಚಾಲಕರಾದ ರಘು ಕೆ. ಎಕ್ಕಾರು, ಮಂಗಳೂರು ವಿಮಾನ ನಿಲ್ದಾಣ ಪುನರ್ ನಿರ್ವಾಸಿತ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಂಕಪ್ಪ ಕಾಂಚನ್, ದಲಿತ ಕಲಾಮಂಡಳಿ ಜಿಲ್ಲಾ ಸಂಚಾಲಕ ಕಮಲಾಕ್ಷ ಬಜಲ್, ಸಿದ್ದಾರ್ಥ ನಗರ ಗ್ರಾಮ ಸಂಘಟನಾ ಸಂಚಾಲಕರಾದ ರವೀಂದ್ರ ಕೋಟ್ಯಾನ್, ಪೂರ್ಣಿಮಾ ಮುಳ್ಳೊಟ್ಟು, ರಾಧಾ ಪೇಜಾವರ, ಹಾಗೂ ವಿವಿಧ ಗ್ರಾಮ ಶಾಖೆಗಳ ಸಂಚಾಲಕರು, ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಲೂಕು ಕಲಾ ಮಂಡಳಿ ಸಂಚಾಲಕರಾದ ಗಂಗಾಧರ ಕೋಟ್ಯಾನ್, ತಾಲೂಕು ಸಮಿತಿ ಖಜಾಂಚಿ ರುಕ್ಕಯ ಅಮೀನ್ ಸ್ವಾಗತಿಸಿ, ಕೃಷ್ಣ ಕೆ ಎಕ್ಕಾರು, ತಾರಾಕ್ಷಿ ಎಂ.ಬಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News