ವಿಟ್ಲ | ಪೊಲೀಸ್ ಇಲಾಖೆ, ʼಡಿ' ಗ್ರೂಪ್ ವತಿಯಿಂದ ಮಾದಕ ವ್ಯಸನ ಸಮಾಜಕ್ಕಾಗಿ ಜನ ಜಾಗೃತಿ ಜಾಥಾ
ವಿಟ್ಲ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಉಪ ವಿಭಾಗ ವಿಟ್ಲ ಪೊಲೀಸ್ ಠಾಣೆ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಟ್ಲ ʼಡಿʼ ಗ್ರೂಪ್ ವತಿಯಿಂದ ವಿಟ್ಲದಲ್ಲಿ ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ಜನ ಜಾಗೃತಿ ಜಾಥಾ ಹಾಗೂ ಸಮಾರಂಭ ನಡೆಯಿತು.
ವಿವಿಧ ಸಂಘಟನೆ ಹಾಗೂ ಶಿಕ್ಷಣ ಸಂಸ್ಥೆಗಳ ಸಹಸ್ರಾರು ಮಂದಿ ಕಾಲ್ನಡಿಗೆ ಜಾಥದಲ್ಲಿ ಭಾಗಹಿಸಿದ್ದರು. ವಿಟ್ಲ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಬ್ ಇನ್‌ಸ್ಪೆಕ್ಟರ್ ರಾಮಕೃಷ್ಣ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿದರು. ಶೈಖ್ ಮಹಮ್ಮದ್ ಇರ್ಫಾನಿ ಫೈಝಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು.
ವಿಟ್ಲ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ವಿಶ್ವೇಶ್ವರ ಭಟ್, ವಿಠಲ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಕಿರಣ್ ಬ್ರಹ್ಮಾವರ, ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಝೀಝ್ ಸನ, ವಿಟ್ಲ ವರ್ತಕರ ಸಂಘದ ಅಧ್ಯಕ್ಷ ಬಾಬು ಕೆ.ವಿ. ಮುಖ್ಯ ಅತಿಥಿಗಳಾಗಿದ್ದರು.
ಡಿ ಗ್ರೂಪ್ ಅಧ್ಯಕ್ಷ ಶಾಕಿರ್ ಅಳಕೆಮಜಲು ಪ್ರಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಅಬೂಬಕರ್ ಅನಿಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.