ಸುರತ್ಕಲ್ | ಚೊಕ್ಕಬೆಟ್ಟು ಮಾಹಿತಿ, ನಾಗರಿಕ ಕೇಂದ್ರದ 15ನೇ ವಾರ್ಷಿಕೋತ್ಸವ
ಸುರತ್ಕಲ್: ಚೊಕ್ಕಬೆಟ್ಟು ಮಾಹಿತಿ ಮತ್ತು ನಾಗರಿಕ ಕೇಂದ್ರದ 15ನೇ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ರವಿವಾರ ಸಂಜೆ ಕಚೇರಿ ಮುಂಭಾಗದಲ್ಲಿ ಜರುಗಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ, ಪಬ್ಲಿಕ್ ಅಡ್ಡೆಸರ್ ಎಂ.ಜಿ.ತಲ್ಲತ್, ವಿಶ್ವಕಪ್ ವಿಜೇತೆ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮಿ, ಸಿ.ಎ. ಫಾಯಿಝ್, ಬೆನಝೀರ್, ಕುಸ್ತಿ ಕ್ರೀಡಾಪಟು ಫಾಹಿಮ್, ಹಿಷಾಮ್ ಅವರನ್ನು ಸನ್ಮಾನಿಸಿ ಗೌರವಿಲಾಯಿತು.
ಮಾಹಿತಿ ಹಾಗೂ ನಾಗರೀಕ ಸೇವಾ ಕೇಂದ್ರದ ಅಧ್ಯಕ್ಷ ನೌಶಾದ್ ಚೊಕ್ಕಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಚೊಕ್ಕಬೆಟ್ಟು ಚರ್ಚ್ ಧರ್ಮಗುರು ಎಸ್.ಪಾಲನ್, ಪಬ್ಲಿಕ್ ಅಡ್ವೈಸರ್ ಎಂ.ಜಿ. ತಲ್ಹತ್, ಎಸ್ಡಿಪಿಐ ರಾಜ್ಯಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಮೊದಲಾದವರು ಮಾತನಾಡಿದರು.
ನಿಕಟಪೂರ್ವ ಮನಪಾ ಸದಸ್ಯೆ ಶಂಶಾದ್ ಅಬೂಬಕರ್, ತಣ್ಣೀರುಬಾವಿ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್, ಮುಹಮ್ಮದ್ ಅಲಿ ರೂಮಿ, ಮುಸ್ಲಿಂ ಜಮಾಅತ್ ಪಣಂಬೂರು ಇದರ ಅಧ್ಯಕ್ಷ ಎಸ್.ಎ.ರಹ್ಮತುಲ್ಲಾ, ಮುಹಮ್ಮದ್ ಕಾನ, ಜುಮಾ ಮಸೀದಿ ಸುರತ್ಕಲ್ ಇದರ ಅಧ್ಯಕ್ಷ ಎಸ್.ಕೆ. ಮುಸ್ತಫಾ, ಝಾಕಿರ್, ಇಬ್ರಾಹಿಂ, ತೌಸೀಫ್ ಕಕ್ಕಿಂಜೆ, ಜಾಫರ್ ಫೈಝಿ ಮತ್ತಿತರರು ಉಪಸ್ಥಿತರಿದ್ದರು.