×
Ad

ಮಂಗಳೂರು| ಡ್ರಗ್ಸ್ ಸೇವನೆ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2025-01-06 22:37 IST

ಮಂಗಳೂರು, ಜ.6: ನಿಷೇಧಿತ ಡ್ರಗ್ಸ್‌ಗಳಾದ ಕೊಕೇನ್ ಮತ್ತು ಚರಸ್ ಸೇವನೆ ಮಾಡಿದ ಆರೋಪದ ಮೇರೆಗೆ ಮೂವರು ಯುವಕರನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.

ಬಿಜೈ ಕಾಪಿಕಾಡ್ ಕುಂಟಿಕಾನದಲ್ಲಿ ಕೊಕೇನ್ ಸೇವನೆ ಮಾಡಿದ್ದಾನೆ ಎನ್ನಲಾದ ಕಾಪಿಕಾಡ್‌ನ ಕುರುಂಬಯ್ಯ (29) ಎಂಬಾತನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಈತ ಕೊಕೇನ್ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ದೃಢಪಟ್ಟಿದೆ. ಇನ್ನೊಂದು ಪ್ರಕರಣದಲ್ಲಿ ಅತ್ತಾವರ ಕಟ್ಟೆ ಬಳಿ ಕೊಂಚಾಡಿಯ ಶುಭಂ (24) ಮತ್ತು ಬೋಳೂರಿನ ರೋಶನ್ ಪಿ.ಎಸ್ (22) ಎಂಬವರನ್ನು ಬಂಧಿಸಿ ವಿಚಾರಿಸಿದಾಗ ಆರೋಪಿಗಳು ಗೋವಾದಿಂದ ಕೊಕೇನ್ ಮತ್ತು ಚರಸ್ ಖರೀದಿಸಿ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News