ಮಂಗಳೂರು: 16 ಮಕ್ಕಳಿಗೆ ಉಚಿತ ವಾಕ್ ಶ್ರವಣ ಯಂತ್ರ ವಿತರಣೆ
ಮಂಗಳೂರು: ಎಸ್.ವಿ.ಟಿ. ಮ್ಯಾಟ್ ಫ್ರೆಂಡ್ಸ್ ವತಿಯಿಂದ 21ನೆ ವರ್ಷದ ಶನೀಶ್ಚರ ಮಹಾಪೂಜೆ ಇತ್ತೀಚೆಗೆ ರಥಬೀದಿ ವೆಂಕಟರಮಣ ದೇವಸ್ಥಾನದ ಮುಂಭಾಗದ ಮಂಟಪದಲ್ಲಿ ವೈಕುಂಠ ಭಟ್ ಪೌರೋಹಿತ್ಯದಲ್ಲಿ ನಡೆಯಿತು.
ಬಾಳಂಭಟ್ ಮನೆತನದ ಗಿರಿಧರ್ ಭಟ್ ಹಾಗೂ ದಂತ ತಜ್ಞ ಡಾ. ಅರ್ಜುನ್ ನಾಯಕ್, ಸಂಸ್ಥೆಯ ಗೌರವಾಧ್ಯಕ್ಷ ವಾಮನ ಪೈ ಹಾಗೂ ಮಾಜಿ ಅಧ್ಯಕ್ಷ ಅರುಣ್ ಪಡಿಯಾರ್, ವೆಂಕಟರಾಯ ಶೆಣೈ, ಸಂಘದ ಅಧ್ಯಕ್ಷ ಅರುಣ್ ಡಿ ರಾವ್ ಮತ್ತು ಸದಸ್ಯರಾದ ಆರ್. ಗಣಪತಿ ಬಾಳಿಗಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಜಿಎಸ್‌ಬಿ ಸಮಾಜದ ಹಿರಿಯ ವೈದಿಕರಾದ ವೇದಮೂರ್ತಿ ಜೋಡುಮಠ ಅಚ್ಯುತ್ ಭಟ್ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅರ್ಜುನ್ ಭಂಡಾರ್‌ಕಾರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ 16 ಮಕ್ಕಳಿಗೆ ಉಚಿತ ವಾಕ್ ಶ್ರವಣ ಯಂತ್ರವನ್ನು ದಾನಿಗಳ ನೆರವಿನಿಂದ ವಿತರಿಸಲಾಯಿತು. ದೇವದಾಸ್ ಕಾಪಿಕಾಡ್ ಅವರ ‘ಎನ್ನನೇ ಕಥೆ’ ಎಂಬ ತುಳು ನಾಟಕ ಪ್ರದರ್ಶನಗೊಂಡಿತು.
ಸಂಧ್ಯಾ ಆರ್. ಕಾಮತ್, ವಿಜಯ ಲಕ್ಷ್ಮೀ ನಾಯಕ್, ಸುಜೀರ್ ವಿಜೇತಾ ನಾಯಕ್, ಅಶ್ವಿನಿ ಎಸ್. ಶೆಣೈ, ಕೇದಾರ್ ಶಣೈ, ವಿನೋದ್ ಕಾಮತ್ ಕಾರ್ಯಕ್ರಮ ನಿರೂಪಿಸಿ, ಸಹಕರಿಸಿದರು.