×
Ad

ಅಡ್ಡೂರು ಸಹರಾ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ

Update: 2025-12-27 18:43 IST

ಮಂಗಳೂರು: ಅಡ್ಡೂರಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ (ರಿ) ಎಂಡಬ್ಲ್ಯುಎ ಮತ್ತು ಸಹರಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ಸಂಚಾಲಿತ ಸಹರಾ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಜರುಗಿತು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಉದ್ಯಮಿ ಹಾಜಿ ಝಕರಿಯಾ ಜೋಕಟ್ಟೆ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ ಅವರು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಮತ್ತು ಆಟದ ಮೈದಾನ ನಿರ್ಮಾಣಕ್ಕೆ ನೆರವಾಗುವೆ. ಐಪಿಎಸ್/ ಐಎಎಸ್/ ಕೆಪಿಎಸ್ ಪರೀಕ್ಷೆ ಹಾಜರಾಗಲು ಇಚ್ಛಿಸುವ ಮಕ್ಕಳಿಗೆ ಪೂರ್ಣ ನೆರವು ನೀಡುವೆ. ಶಾಲೆಗಳಲ್ಲಿ ವೃತ್ತಿಪರ/ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಎಲ್ಲರೂ ಶಿಸ್ತು ಮೈಗೂಡಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.

ಶಾಸಕ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮಂಗಳೂರು ಎಸಿಪಿ ಶ್ರೀಕಾಂತ್ ಮಾತನಾಡಿದರು.

ಈ ಸಂದರ್ಭ ಹಾಜಿ ಝಕಾರಿಯ ಜೋಕಟ್ಟೆ, ಶಾಸಕ ಐವನ್ ಡಿಸೋಜರನ್ನು ಸನ್ಮಾನಿಸಲಾಯಿತು. ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್‌ನ ಉಚಿತ ಆಂಬುಲೆನ್ಸ್ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ಸಿಬ್ಬಂದಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಉಪನ್ಯಾಸಕಿ ಸ್ವಾತಿ ಸ್ವಾಗತಿಸಿದರು. ಪ್ರಾಂಶುಪಾಲ ಕೇಶವ ಎಚ್. ಪ್ರಾಸ್ತಾವಿಕವಾಗಿ ಮಾತಮಾಡಿದರು. ಮಾಜಿ ಸಚಿವ ಬಿ. ರಮಾನಾಥ ರೈ, ಉದ್ಯಮಿ ಅಬ್ದುಲ್ ರಝಾಕ್, ಎಂಡಬ್ಲ್ಯುಎ ಅಧ್ಯಕ್ಷ ಯು.ಪಿ.ಇಬ್ರಾಹಿಂ, ಎಂಡಬ್ಲ್ಯುಎ ಸಂಚಾಲಕ ಎ.ಕೆ. ಇಸ್ಮಾಯಿಲ್, ಉಪಾಧ್ಯಕ್ಷರಾದ ಅಹ್ಮದ್ ಬಾವ ಅಂಗಡಿಮನೆ ಮತ್ತು ಎನ್. ಇ.ಮುಹಮ್ಮದ್, ಕಾರ್ಯದರ್ಶಿ ಎನ್. ಇಬ್ರಾಹಿಂ, ಖಜಾಂಚಿ ಎ. ಕೆ. ಅಶ್ರಫ್, ಗ್ರಾಮಲೆಕ್ಕಿಗ ಡಿ. ಎಸ್. ಮುಹಮ್ಮದ್, ಜೊತೆ ಕಾರ್ಯದರ್ಶಿ ನೂರುಲ್ ಅಮಿನ್, ಆಡಳಿತ ಮಂಡಳಿಯ ಗೌರವಾಧ್ಯಕ್ಷ ಹಾಜಿ ಎಂ.ಮೈಯ್ಯೆದ್ದಿ, ಅಧ್ಯಕ್ಷ ಪಿಟಿಎ ಅಧ್ಯಕ್ಷ ವಿಶ್ವಾಂಭರ, ಪಿಟಿಎ ಉಪಾಧ್ಯಕ್ಷರಾದ ಸದಕತ್ತುಲ್ಲ, ಪ್ರಮೀಳಾ ಡಿ. ಮಾರ್ಲ, ಶಾಲಾ ಉಪ-ಪ್ರಾಂಶುಪಾಲ ದೇವಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಅಶ್ವಿನಿ, ಹರ್ಷಿತಾ, ಹೇಮಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಕಿಶೋರಿ ವಂದಿಸಿದರು. ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News