ಪರ್ಲೋಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ ಅಧ್ಯಕ್ಷರಾಗಿ ಕೆ.ಬಿ.ಕಾಸಿಂ ಹಾಜಿ ಆಯ್ಕೆ
ಕೆ.ಬಿ.ಕಾಸಿಂ ಹಾಜಿ | ಅಬ್ದುಲ್ ಸಮದ್ | ಪಿ.ಕೆ.ಅಬ್ಬಾಸ್
ಬಂಟ್ವಾಳ : ಮಾಣಿ ಸಮೀಪದ ಪರ್ಲೋಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಕೆ.ಬಿ.ಕಾಸಿಂ ಹಾಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಸೀದಿಯ ಗೌರವಾಧ್ಯಕ್ಷ ಹಾಜ ಪಿ.ಕೆ. ಆದಂ ದಾರಿಮಿ ಅವರ ನೇತೃತ್ವದಲ್ಲಿ ಮಸೀದಿಯಲ್ಲಿ ಶುಕ್ರವಾರ ನಡೆದ ಮಸೀದಿ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಈ ಸಂದರ್ಭ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ, ಕಾರ್ಯದರ್ಶಿ ರಫೀಕ್ ಹಾಜಿ ನೇರಳಕಟ್ಟೆ, ಕೋಶಾಧಿಕಾರಿ ಪಿ.ಕೆ.ಅಬ್ಬಾಸ್ ಪರ್ಲೊಟ್ಟು, ಉಪಾಧ್ಯಕ್ಷ ಸಿದ್ದೀಕ್ ಪರ್ಲೊಟ್ಟು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಅಮ್ಮಿ, ಪರ್ಲೊಟ್ಟು ಮಸೀದಿ ಖತೀಬ್ ಸೈದಾಲಿ ಮುಸ್ಲಿಯಾರ್ ಉಪಸ್ಥಿತರಿದ್ದರು.
ಉಪಾಧ್ಯಕ್ಷರಾಗಿ ಸಿದ್ದೀಕ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಸಮದ್, ಜೊತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ಶರೀಫ್ ಪಿ.ಕೆ, ಕೋಶಾಧಿಕಾರಿಯಾಗಿ ಹೈದರ್ ಬೋಳಿಯಾರ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ರಫೀಕ್ ಹಾಜಿ ನೇರಳಕಟ್ಟೆ, ಶಾಹುಲ್ ಹಮೀದ್ (ಅಮ್ಮಿ) ಪರ್ಲೊಟ್ಟು , ಫಾರೂಕ್ ಹನೀಫಿ, ಪಿ.ಕೆ. ರಶೀದ್, ಪಿ.ಕೆ. ಝುಬೈರ್, ಸಲೀಂ, ಆಶಿಕ್ ಹಾಗೂ ಮಸೂದ್ ಪರ್ಲೊಟ್ಟು ಅವರನ್ನು ಆರಿಸಲಾಯಿತು.
ಸಿದ್ದೀಕ್ ಪರ್ಲೊಟ್ಟು ಸ್ವಾಗತಿಸಿ, ವಂದಿಸಿದರು.