ಮಂಗಳೂರು | ಡಿ.6ರಂದು ಲಯನ್ಸ್ ಪ್ರಾಂತೀಯ ಸಮ್ಮೇಳನ
ಮಂಗಳೂರು, ಡಿ.4: ಲಯನ್ಸ್ ಜಿಲ್ಲೆ 317ಡಿ ಇದರ ಪ್ರಾಂತ್ಯ 4ರ ಪ್ರಾಂತೀಯ ಸಮ್ಮೇಳನವು ಡಿ.6ರಂದು ಮಧ್ಯಾಹ್ನ 3:30ರಿಂದ ಬಿಜೈ ಚರ್ಚ್ ಹಾಲ್ ನಲ್ಲಿ ನಡೆಯಲಿದೆ ಎಂದು ಪ್ರಾಂತೀಯ ಅಧ್ಯಕ್ಷರಾದ ವಿದ್ಯಾ ಕಾಮತ್ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆವರು ಮಾತನಾಡಿದರು.
ಪ್ರಾಂತೀಯ ಅಧ್ಯಕ್ಷರಾದ ವಿದ್ಯಾ ಕಾಮತ್ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಅಶೋಕ್ ಕಾಮತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೂರ್ವ ರಾಜ್ಯಪಾಲರು ಮತ್ತು ಗ್ಯಾಲೆಂಟರಿ ಶೌರ್ಯ ಪದಕ ಪುರಸ್ಕೃತ ಡಾ.ಪಿ ಆರ್ ಎಸ್ ಚೇತನ್ ಮತ್ತು ಗೌರವ ಅತಿಥಿಯಾಗಿ ಚಿತ್ರನಟರಾದ ಕಾಸರಗೋಡು ಚಿನ್ನ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಾಂತ್ಯ 4ರಲ್ಲಿ ಎರಡು ವಲಯಗಳಿದ್ದು, ವಲಯ ಒಂದರ ಅಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಮತ್ತು ವಲಯ ಎರಡರ ಅಧ್ಯಕ್ಷರಾಗಿ ಆಶಾ ಚಂದ್ರಮೋಹನ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಪ್ರಾಂತೀಯ 4ರ 9ಲಯನ್ಸ್ ಕ್ಲಬ್ ಗಳಿಂದ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾ ಕಾಮತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಸಮಿತಿ ಅಧ್ಯಕ್ಷ ಗೀತಾ ರಾವ್, ಕಾರ್ಯದರ್ಶಿ ಗಣೇಶ್ ಶೆಟ್ಟಿ, ಖಜಾಂಚಿ ಉಮಾ ಹೆಗ್ಡೆ ಮತ್ತು ವಲಯಾಧ್ಯಕ್ಷ ಆಶಾ ಚಂದ್ರಮೋಹನ್, ಮುಹಮ್ಮದ್ ಇಕ್ಬಾಲ್ ಪ್ರಾಂತೀಯ ರಾಯಭಾರಿ ಜಯಪ್ರಕಾಶ್, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ್ ಶೆಟ್ಟಿಗಾರ್ ಉಪಸ್ಥಿತರಿದ್ದರು.