ಎಸ್ ಜೆ ಎಂ ಮದ್ರಸ ವಿದ್ಯಾರ್ಥಿಗಳ ಪ್ರತಿಭೋತ್ಸವ 2026;ನಿರ್ವಹಣಾ ಸಮಿತಿ ಆಯ್ಕೆ
ಮಂಗಳೂರು: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಕರ್ನಾಟಕ ಇದರ ಅಧೀನದಲ್ಲಿ ನಡೆಯಲಿರುವ ಮದ್ರಸಾ ವಿದ್ಯಾರ್ಥಿಗಳ ಪ್ರತಿಭೋತ್ಸವ 2026 ಇದರ ನಿರ್ವಹಣಾ ರಾಜ್ಯ ಸಮಿತಿಯನ್ನು ಇತ್ತೀಚೆಗೆ ನಡೆದ ಎಸ್ ಜೆ ಎಂ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು.
ಚೇರ್ಮಾನಾಗಿ ಸಿರಾಜುದ್ದೀನ್ ಸಖಾಫಿ ಮಠ, ಉಪ ಚೇರ್ಮಾನಾಗಿ ಅಬ್ದುಲ್ಲ ಸಖಾಫಿ ಕೊಳಕೇರಿ, ಚೀಫ್ ಕನ್ವೀನರಾಗಿ ಅಬೂಬಕರ್ ಮುಸ್ಲಿಯರ್ ಕುಕ್ಕಾಜೆ, ಜೊತೆ ಕನ್ವೀನರಾಗಿ ಶರೀಫ್ ಸಖಾಫಿ ನೆಕ್ಕಿಲ್ ಆಯ್ಕೆಗೊಂಡರು. ಸದಸ್ಯರುಗಳಾಗಿ ಎನ್ ಎ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಪಿ ಎಂ ಮಹಮ್ಮದ್ ಮದನಿ, ರಶೀದ್ ಸಖಾಫಿ ಮಜೂರು, ಹಾಫಿಲ್ ಹನೀಫ್ ಮಿಸ್ಬಾಹಿ, ಇಬ್ರಾಹಿಂ ಸಖಾಫಿ ಪುಂಡೂರ್, ಇಸ್ಮಾಯಿಲ್ ಸಅದಿ ಉರುಮಣೆ, ಇಬ್ರಾಹಿಂ ನಈಮಿ ಇವರನ್ನು ಆರಿಸಲಾಯಿತು.
ಮದ್ರಸ, ರೇಂಜ್, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಪ್ರತಿಭೋತ್ಸವ ಕಾರ್ಯಕ್ರಮ ನಡೆಯಲಿದೆಯೆಂದು ನಿರ್ವಹಣಾ ಸಮಿತಿ ಚೀಫ್ ಕನ್ವೀನರ್ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ತಿಳಿಸಿದರು.