×
Ad

ಮಂಗಳೂರು: ಗಾಂಜಾ ಸಾಗಿಸುತ್ತಿದ್ದ ಆರೋಪಿ ಸೆರೆ

Update: 2023-07-29 22:24 IST

ಮಂಗಳೂರು, ಜು.29: ಗೋವಾದಿಂದ ಕೇರಳಕ್ಕೆ ಗಾಂಜಾವನ್ನು ಸಾಗಿಸಲು ಯತ್ನಿಸುತ್ತಿದ್ದ ಆರೋಪಿಯನ್ನು ನಗರದ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ಪಯ್ಯನ್ನೂರಿನ ಫೈಸಲ್(41) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 3.355 ಕೆಜಿ ಗಾಂಜಾ ವಶಪಡಿಸಲಾಗಿದೆ.

ಜು.26ರಂದು ಬೆಳಗ್ಗೆ 8:30ಕ್ಕೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಪೈಸಲ್‌ನನ್ನು ಸಂಶಯದ ಮೇರೆಗೆ ಪೊಲೀಸರು ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಪತ್ತೆಯಾಗಿದೆ.

ಆರೋಪಿಯು ಗೋವಾದಿಂದ ಬಸ್‌ನಲ್ಲಿ ಗಾಂಜಾವನ್ನು ತಂದು ರೈಲಿನಲ್ಲಿ ಕೇರಳದ ಕಣ್ಣೂರಿಗೆ ಸಾಗಿಸಲು ನಿಂತಿದ್ದ ಎನ್ನಲಾಗಿದೆ. ಸಂಶಯಗೊಂಡ ರೈಲ್ವೆ ಇನ್‌ಸ್ಪೆಕ್ಟರ್ ಮೋಹನ ಕೊಟ್ಟಾರಿ, ಎಎಸ್ಸೈ ಮಧುಚಂದ್ರ, ಹೆಡ್‌ಕಾನ್‌ಸ್ಟೆಬಲ್‌ಗಳಾದ ಮಧು ಆರ್.ಎಸ್, ಸೋಮನಾಥ ಶಿಂಧೆ ಆರೋಪಿಯನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News