×
Ad

ವಿಟ್ಲ: ಮನೆ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿತ

Update: 2024-08-26 21:58 IST

ವಿಟ್ಲ: ಮಳೆಗೆ ಭಾರೀ ಪ್ರಮಾಣದ ಗುಡ್ಡ ಮನೆ ಮೇಲೆ ಕುಸಿದು ಬಿದ್ದಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದು, ಮನೆಗೆ ಹಾನಿಯಾದ ಘಟನೆ ವಿಟ್ಲ ಕಸಬಾ ಗ್ರಾಮದ ಕುರುಂಬಳ ಎಂಬಲ್ಲಿ ನಡೆದಿದೆ.

ಕುರುಂಬಳ ನಿವಾಸಿ ಕಲಂದರ್ ಅಲಿ ಎಂಬವರ ಮನೆ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿದು ಬಿದ್ದಿದೆ. ಮನೆಯಲ್ಲಿ ಮಕ್ಕಳು ಸಹಿತ ಏಳು ಮಂದಿ ಇದ್ದು, ಅವರು ಮನೆಯೊಳಗಡೆ ಇದ್ದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಗುಡ್ಡ ಸಮೀಪ ಮನೆಗಳಿದ್ದು, ಅಪಾಯದ ಈ ಬಗ್ಗೆ ಈ ಹಿಂದೆ ಪಂಚಾಯತ್ ಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮತ್ತಷ್ಟು ಗುಡ್ಡ ಕುಸಿಯುವ ಭೀತಿಯಿದ್ದು, ಮನೆಮಂದಿಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.






Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News