×
Ad

ಉಳ್ಳಾಲ ಪೇಟೆ: ರಹ್ಮಾನಿಯಾ ಜುಮಾ ಮಸೀದಿಯಲ್ಲಿ ಮೀಲಾದುನ್ನಬಿ ಕಾರ್ಯಕ್ರಮ

Update: 2024-09-30 22:27 IST

ಮಂಗಳೂರು: ಬುಸ್ತಾನುಲ್ ಉಲೂಮ್ ಮದ್ರಸದ ವತಿಯಿಂದ ಮೀಲಾದುನ್ನಬಿ ಮಕ್ಕಳ ಕಾರ್ಯಕ್ರಮ ನಡೆಯಿತು. ಮಸೀದಿಯ ಅಧ್ಯಕ್ಷ ಮೊಹಿಯುದ್ದೀನ್ ಹಸನ್ ಹಾಜಿ ಅಧ್ಯಕ್ಷತೆಯಲ್ಲಿ ರಹ್ಮಾನಿಯ ಮಸೀದಿಯ ಜುಮಾ ಖತೀಬ್ ಹಾಜಿ ಇಬ್ರಾಹಿಂ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಉಳ್ಳಾಲ ಪೇಟೆ ಜುಮಾ ಮಸೀದಿಯ ಆಡಳಿತ ಸಮಿತಿಯ ವತಿಯಿಂದ ದೀರ್ಘಕಾಲ ಬುಸ್ತಾನುಲ್ ಉಲೂಂ ಮದ್ರಸದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಶರೀಫ್ ಮದನಿ ಅವರನ್ನು ಸನ್ಮಾನಿಸಲಾಯಿತು. ಪೇಟೆ ಮೊಹಲ್ಲಾದವರಿಗೆ ಏರ್ಪಡಿಸಲಾದ ಕ್ವಿಝ್ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ, ದ್ವೀತಿಯ, ತೃತೀಯ ಬಹುಮಾನ ನೀಡಲಾಯಿತು.

 ಈ ವೇಳೆ ಅ.27ರಂದು ಉಳ್ಳಾಲ ಪೇಟೆ ರಹ್ಮಾನಿಯಾ ಜುಮಾ ಮಸೀದಿ ವತಿಯಿಂದ ನಡೆಯುವ ರಕ್ತದಾನ ಶಿಬಿರದ ಪೋಸ್ಟರನ್ನು ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಶಿಹಾಬ್ ಸಖಾಫಿ, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಯು.ಎಚ್.ಫಾರೂಕ್, ಇಶಾಕ್, ಉಳ್ಳಾಲ ಪೇಟೆ ಮಸೀದಿಯ ಉಪಾಧ್ಯಕ್ಷ ನಝೀರ್ ಕರಾವಳಿ, ಖಜಾಂಚಿ ಯು.ಬಿ. ಯೂಸುಫ್, ಸದಸ್ಯ ಶರೀಫ್ ಬಸ್ತಿಪಡ್ಪು, ಶರಫಾತ್, ಅಝೀಮ್, ಫಾರೂಕ್ ಸಾದುಕನ, ಇಸ್ಮಾಯಿಲ್ ಪುತ್ತು ಬಾವ, ಅಫ್ರಿದ್ ಕೊಟ್ಟಾರ, ಸದರ್ ಮುಅಲ್ಲಿಂ ಅಶ್ರಫ್, ನಾಸಿರ್ ಮುಸ್ಲಿಯಾರ್, ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಶನ್ ಅಧ್ಯಕ್ಷ ಫಯಾಝ್ ಕೊಟ್ಟಾರ, ಬ್ಲ್ಯಾಕ್ ಆ್ಯಂಡ್ ವೈಟ್ ಶಹೀರ್, ಪೇಟೆ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುಸ್ತಫಾ ಅಹ್ಮದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News