ಅನಿವಾಸಿ ಕನ್ನಡಿಗರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಸ್ವೀಕರ್, ಡಿಸಿಎಂ ಭೇಟಿಯಾದ ನಿಯೋಗ
ಮಂಗಳೂರು: ಪ್ರವಾಸಿ ಕೂಟ ವಿಟ್ಲ(ರಿ) ಇದರ ನಿಯೋಗವು ಡಿಸಿಎಂ ಡಿ.ಕೆ ಶಿವಕುಮಾರ್ , ವಿಧಾನ ಸಭೆಯ ಸ್ಪೀಕರ್ ಯು.ಟಿ ಖಾದರ್ ಹಾಗೂ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರನ್ನು ಇತ್ತೀಚೆಗೆ ಭೇಟಿಯಾಗಿ ಅನಿವಾಸಿ ಕನ್ನಡಿಗರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದೆ.
ಅನಿವಾಸಿ ಕನ್ನಡಿಗರ ಕ್ಷೇಮಾಭಿವೃದ್ಧಿಗಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಲು, ನಿವೃತ್ತ ಅನಿವಾಸಿ ಕನ್ನಡಿಗರಿಗೆ ಪಿಂಚಣಿ ಭತ್ಯೆ ಒದಗಿಸಲು ಹಾಗೂ ಸ್ವ-ಉದ್ಯೋಗಕ್ಕಾಗಿ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದೆ.
ನಿಯೋಗದಲ್ಲಿ ಪ್ರವಾಸಿ ಕೂಟ ವಿಟ್ಲ(ರಿ) ಅಧ್ಯಕ್ಷ ಬಹರೈನ್‌ನ ಮುಹಮ್ಮದ್ ಮಸೂದ್ ವಿಟ್ಲ , ಸಂಘದ ಸ್ಥಾಪಕರಾದ ಹೈದರಾಲಿ ಇಸ್ಮಾಯಿಲ್ ಮೇಗಿನಪೇಟೆ (ಸೌದಿ ಅರೇಬಿಯಾ), ಮಾಧ್ಯಮ ವಕ್ತಾರ ಸಫ್ವಾನ್ ಕೋಡಪದವು (ಬಹರೈನ್), ಬದ್ರುದ್ದೀನ್ (ಬಹರೈನ್) ಹಾಗು ಕಾನೂನು ಸಲಹೆಗಾರ ಅಡ್ವೋಕೇಟ್ ಅನ್ಸಾರ್ ವಿಟ್ಲ ಉಪಸ್ಥಿತರಿದ್ದರು.