ಧರ್ಮಸ್ಥಳ ಪ್ರಕರಣ| ಆರೋಪಿ ಚಿನ್ನಯ್ಯನ ಜಾಮೀನು ಪ್ರಕ್ರಿಯೆ ಪೂರ್ಣ; ಇಂದು ಬಿಡುಗಡೆ ಸಾಧ್ಯತೆ
Update: 2025-12-17 17:38 IST
ಫೈಲ್ ಫೋಟೊ
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಸದ್ಯ ಶಿವಮೊಗ್ಗ ಜೈಲಿನಲ್ಲಿರುವ ಆರೋಪಿ ಚಿನ್ನಯ್ಯನಿಗೆ ದ.ಕ ಜಿಲ್ಲಾ ಕೋರ್ಟ್ ನ.24ರಂದು 12 ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದ್ದರೂ ಬಾಂಡ್ ಮತ್ತು ಇಬ್ಬರು ಜಾಮೀನುದಾರರ ಕೊರೆತೆಯಿಂದ 23 ದಿಗಳಿಂದ ಬಿಡುಗಡೆ ಭಾಗ್ಯ ಬಂದಿರಲಿಲ್ಲ.
ಆರೋಪಿ ಚಿನ್ನಯ್ಯನಿಗೆ ಸಹಾಯ ಮಾಡಲು ಪತ್ನಿ ಮಲ್ಲಿಕಾ ಮೂಲಕ ಬೆಳ್ತಂಗಡಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯಕ್ಕೆ ಡಿ.17 ರಂದು ಒಂದು ಲಕ್ಷದ ಬಾಂಡ್ ನೀಡಲು ಮತ್ತು ಇಬ್ಬರು ಜಾಮೀನದಾರರನ್ನು ಕರೆದು ಕೊಂಡು ಬಂದು ಕಾನೂನು ಪಕ್ರಿಯೆ ಮುಗಿಸಿ ಶಿವಮೊಗ್ಗ ಜೈಲಿನತ್ತ ಪ್ರಯಾಣ ಮಾಡಿದ್ದಾರೆ.
ಇನ್ನೂ ಬೆಳ್ತಂಗಡಿ ನ್ಯಾಯಾಲಯದಲ್ಲಿ ಬಿಡುಗಡೆ ಆದೇಶ ಪತ್ರ ಮೇಲ್ ಮೂಲಕ ಶಿವಮೊಗ್ಗ ಜೈಲಿಗೆ ತಲುಪಿದ ಬಳಿಕ ಜೈಲಿನಿಂದ ಚಿನ್ನಯ್ಯ ಡಿ.17 ರಂದು ಸಂಜೆ ವೇಳೆಗೆ ಬಿಡುಗಡೆಯಾಗಲಿದ್ದಾನೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.