×
Ad

ಮಂಗಳೂರಿನಲ್ಲಿ ಮೀಲಾದುನ್ನಬಿ ರ‍್ಯಾಲಿ

Update: 2023-09-28 22:39 IST

ಮಂಗಳೂರು: ಪ್ರವಾದಿ ಮುಹಮ್ಮದ್ (ಸ)ರ ಜನ್ಮ ದಿನಾಚರಣೆಯ ಅಂಗವಾಗಿ ಮಂಗಳೂರು ಸೋಷಿಯಲ್ ಸರ್ವಿಸ್ ಸೆಂಟರ್ ಇದರ ವತಿಯಿಂದ ಸಾರ್ವಜನಿಕ ಮಿಲಾದ್ ರ‍್ಯಾಲಿ ಗುರುವಾರ ನಗರದಲ್ಲಿ ನಡೆಯಿತು.

ಕುದ್ರೋಳಿಯ ನಡುಪಳ್ಳಿ ಜುಮಾ ಮಸೀದಿಯಿಂದ ಆರಂಭಗೊಂಡ ರ‍್ಯಾಲಿಯು ಮಂಗಳೂರಿನ ಕೇಂದ್ರ ಜುಮಾ ಮಸೀದಿ ರಸ್ತೆಯಾಗಿ ಬಾವುಟಗುಡ್ಡದ ಈದ್ಗಾ ಮಸೀದಿವರೆಗೆ ನಡೆಯಿತು. ರ‍್ಯಾಲಿಯಲ್ಲಿ ಬಂದರ್, ಕುದ್ರೋಳಿ ಪರಿಸರದ ಮದ್ರಸ ವಿದ್ಯಾರ್ಥಿಗಳ ಆಕರ್ಷಕ ದಫ್ ಪ್ರದರ್ಶನವಿತ್ತು.

ಕೇಂದ್ರ ಜುಮಾ ಮಸೀದಿಯ ಬಳಿ ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮೀಲಾದ್ ರ‍್ಯಾಲಿಗೆ ಚಾಲನೆ ನೀಡಿ ಶುಭ ಹಾರೈಸಿದರು.

ಮಂಗಳೂರು ಸೋಷಿಯಲ್ ಸರ್ವಿಸ್ ಸೆಂಟರ್ ಅಧ್ಯಕ್ಷ ಕೆ.ಪಿ. ಅಬ್ದುಲ್ ರಶೀದ್, ಗೌರವಾಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ. ಅಶ್ರಫ್, ಪದಾಧಿಕಾರಿಗಳಾದ ಸಲೀಂ, ಅಶ್ರಫ್ ಬಯ್ಯ, ರಿಯಾಝ್ ಅಹ್ಮದ್, ರಿಯಾಝುದ್ದೀನ್, ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಮಸೀದಿಯ ಕೋಶಾಧಿಕಾರಿ ಸೈಯದ್ ಬಾಷಾ ತಂಳ್ ಮತ್ತಿತರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News