×
Ad

ಸಿಎ ಪರೀಕ್ಷೆಯಲ್ಲಿ ಮುಹಮ್ಮದ್ ಸಾಬಿತ್ ತೇರ್ಗಡೆ

Update: 2024-12-28 12:04 IST

ಬಂಟ್ವಾಳ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ(ಐಸಿಎಐ) ನವೆಂಬರ್ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಮುಹಮ್ಮದ್ ಸಾಬಿತ್ ತುಂಬೆ ತೇರ್ಗಡೆ ಹೊಂದಿದ್ದಾರೆ.

ಫೌಂಡೇಶನ್, ಇಂಟರ್ಮೀಡಿಯೇಟ್ ಪರೀಕ್ಷೆಗಳಲ್ಲಿ ‌ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸೌದಿ ಅರೇಬಿಯಾದ ದಮ್ಮಾಮ್ ನ ಇಂಡಿಯನ್ ಇಂಟರ್ನ್ಯಾಶನಲ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ, ಬಂಟ್ವಾಳದ ಬಿಆರ್‌ಎಂಪಿಎಸ್ ನಲ್ಲಿ ಪ್ರೌಢಶಿಕ್ಷಣ, ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಸಾಯನ್ಸ್ ಶಿಕ್ಷಣ ಪಡೆದಿರುವ ಅವರು, ಬಳಿಕ ಸ್ವಯಂ ಅಧ್ಯಯನ ಮಾಡಿ ಕಳೆದ ನವೆಂಬರ್ ತಿಂಗಳಲ್ಲಿ ಸಿಎ ಅಂತಿಮ ಪರೀಕ್ಷೆ ಬರೆದಿದ್ದರು.

ಅವರು ಪಾಣೆಮಂಗಳೂರು ನಂದಾವರದ, ಪ್ರಸ್ತುತ ತುಂಬೆ ನಿವಾಸಿಯಾಗಿರುವ ಅಬ್ದುಸ್ಸಮದ್ ಹಾಗೂ ತುಂಬೆಯ ಸಕೀನಾ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News