ಶಿಯಾನ್ಸ್ 2025 - ರಾಷ್ಟ್ರೀಯ ಮಟ್ಟದ ಅಂತರ್-ಕಾಲೇಜು ಯುಜಿ ಪಿಜಿ ಫೆಸ್ಟ್
ಮಂಗಳೂರು: ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಳಚ್ಚಿಲ್ ಇದರ ಎಂಬಿಎ ವಿಭಾಗದಿಂದ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಮಾರ್ಚ್ 6 ಮತ್ತು 7 ರಂದು ಎರಡು ದಿನಗಳ ಮ್ಯಾನೇಜ್ಮೆಂಟ್ ಫೆಸ್ಟ್ ಅನ್ನು ಆಯೋಜಿಲಾಗಿದೆ ಎಂದು ಸಂಯೋಜಕರಾದ ಪ್ರೊ.ಪ್ರಜ್ವಲ್ ಬಿ.ಕೆ.ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ಮತ್ತು ನೆರೆಯ ರಾಜ್ಯಗಳ ವಿವಿಧ ಭಾಗಗಳನ್ನು ಒಳಗೊಂಡ ವಿವಿಧ ಪಿಜಿ ಮತ್ತು ಯುಜಿ ಕಾಲೇಜುಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಮ್ಯಾನೇಜ್ಮೆಂಟ್ ಫೆಸ್ಟ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಎರಡು ದಿನಗಳ ಮ್ಯಾನೇಜ್ಮೆಂಟ್ ಫೆಸ್ಟ್‌ನಲ್ಲಿ ಪಿಜಿ ವಿದ್ಯಾರ್ಥಿಗಳಿಗೆ ಬೆಸ್ಟ್ ಮ್ಯಾನೇಜರ್, ಮಾರ್ಕೆಟಿಂಗ್, ಹೂಮನ್ ರಿಸೋರ್ಸ್, ಫೈನಾನ್ಸ್ ಮತ್ತು ಪಬ್ಲಿಕ್ ರಿಲೇಷನ್ಸ್ ಈವೆಂಟ್ ಹಾಗೂ ಬೆಸ್ಟ್ ಮ್ಯಾನೇಜರ್, ಮಾರ್ಕೆಟಿಂಗ್, ಹೂಮನ್ ರಿಸೋರ್ಸ್ ಫೈನಾನ್ಸ್, ಕ್ವಿಝ್, ಮಿಸ್ಟರ್ ಆ್ಯಂಡ್ ಮಿಸ್ ಶಿಯಾನ್, ಗ್ರೂಪ್ ಡಾನ್ಸ್, ಛಾಯಾಗ್ರಹಣ ಮತ್ತು ವೀಡಿಯೊಗ್ರಫಿ ಈವೆಂಟ್‌ಗಳನ್ನು ಯುಜಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ.
ಉದ್ಯಮಿ ಸಾಹೀಲ್ ರೈ ಉದ್ಘಾಟಿಸಲಿರುವರು.
ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಎ.ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿ.ಎ.ಎ.ರಾಘವೇಂದ್ರರಾವ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಉಪಕುಲಾಧಿಪತಿ ಡಾ.ಎ.ಶ್ರೀನಿವಾಸ್ ರಾವ್ , ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯೆಯರುಗಳಾದ ಎ.ವಿಜಯಲಕ್ಷ್ಮೀ ಆರ್. ರಾವ್ ಮತ್ತು ಎ.ಮಿತ್ರಾ ಎಸ್. ರಾವ್ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. 7 ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜೆಂಟ್ ಪ್ರಾಂಶುಪಾಲ ಪ್ರೊ.ಮಂಜುನಾಥ್ ಕಾಮತ್ ಎಂ, ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರಿಂದ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ನೀಡಲಾಗುವುದು ಪ್ರೊ.ಪ್ರಜ್ವಲ್ ಬಿ.ಕೆ. ಮಾಹಿತಿ ನೀಡಿದರು.
ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಅಜೋಯ್ ಎಸ್ ಜೋಸೆಫ್.. ಮತ್ತು ಪಿಜಿ ಫೆಸ್ಟ್ ನ ವಿದ್ಯಾರ್ಥಿ ಸಂಯೋಜಕ ಉಲ್ಲಾಸ್ ಶೆಟ್ಟಿ ಮತ್ತು ರಕ್ಷಿತ್ ಹಾಗೂ ಯುಜಿ ಫಸ್ಟ್‌ನ ವಿದ್ಯಾರ್ಥಿ ಸಂಯೋಜಕರಾದ ಸುಹಾಸ್ ಎಚ್ ಮತ್ತು ರಾಯ್ ಸ್ಪೇನ್ ಕ್ಷೇವಿಯರ್ ರೋಡ್ರಿಗಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.