×
Ad

ನೇರಳಕಟ್ಟೆ : ಮುರಿದು ಬಿದ್ದ ಬೃಹತ್ ಗಾತ್ರದ ಮರ; ತಪ್ಪಿದ ಅಪಾಯ

Update: 2025-08-15 14:55 IST

ವಿಟ್ಲ : ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ ಸಮೀಪದ ಪರ್ಲೊಟ್ಟು ಎಂಬಲ್ಲಿ ರಸ್ತೆಯ ಮೇಲೆ ತುಂಬಾ ಹಳೆಯದಾದ ಬೃಹತ್ ಗಾತ್ರದ ಮರವೊಂದು ಮುರಿದು ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆದಿದೆ.

ಅದೃಷ್ಟವಶಾತ್  ಯಾವುದೇ ವಾಹನಗಳು ಸಂಚಾರವಿಲ್ಲದ ಸಂದರ್ಭದಲ್ಲಿ ಮರ ಬಿದ್ದಿರುವುದರಿಂದ ಅಪಾಯ ತಪ್ಪಿದೆ.

ರಜೆಯಾದ ಕಾರಣ ವಾಹನಗಳ ಓಡಾಟ ತುಸು ಕಡಿಮೆಯಿತ್ತು. ಆದರೂ ಮರ ಬೀಳುವ ಸ್ವಲ್ಪವೇ ಮೊದಲು ಲಾರಿ ಸಹಿತ ಘನವಾಹನಗಳು ಮುಂದೆ ಹೋಗಿದ್ದನ್ನು ಸ್ಥಳೀಯರು ನೆನಪಿಸುತ್ತಾರೆ.

ಸ್ಥಳೀಯರು ಮರಗಳನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರ ಮುಕ್ತಗೊಳಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News