ನೆಟ್ಲಮುಡ್ನೂರು: ನೇತ್ರ ಸಂಜೀವಿನಿ ಸ್ವ ಸಹಾಯ ಗುಂಪು ರಚನೆ
Update: 2023-11-03 22:18 IST
ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ಸೌಂದರ್ಯ ಸಂಜೀವಿನಿ ಒಕ್ಕೂಟದ 27 ನೇ ನೂತನ ಗುಂಪು ನೇತ್ರ ಸಂಜೀವಿನಿ ಗುಂಪು ಇದರ ಉದ್ಘಾಟನಾ ಸಮಾರಂಭವು ಶುಕ್ರವಾರ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆಯಿತು.
ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಮಿತಾ ಡಿ ಪೂಜಾರಿ ಉದ್ಘಾಟಿಸಿದರು. ಅಭಿವೃದ್ಧಿ ಅಧಿಕಾರಿ ಅನುಷಾ ಶುಭ ಹಾರೈಸಿದರು. ಸದಸ್ಯರಾದ ಲತೀಫ್ ನೇರಳಕಟ್ಟೆ, ಶಕೀಲಾ ಕೆ.ಪೂಜಾರಿ ಅತಿಥಿಗಳಾಗಿ ಭಾಗವಹಿಸಿದ್ದರು.
ಗುಂಪಿನ ಅಧ್ಯಕ್ಷೆ ಆಶಾ ಗಿರೀಶ್ ದಾಸಕೋಡಿ, ಕಾರ್ಯದರ್ಶಿ ಸುಜಾತಾ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಪುಸ್ತಕ ಬರಹಗಾರರಾದ ಸುಧಾ ಸ್ವಾಗತಿಸಿ, ವಂದಿಸಿದರು.