×
Ad

ಬಿಜೆಪಿ ಸರಕಾರ ಎಲ್ಲದಕ್ಕೂ ಅಡ್ಡಿ ಮಾಡಿತ್ತು: ದ್ವಾರಕನಾಥ

Update: 2023-10-07 21:55 IST

ಮಂಗಳೂರು, ಅ.7: ಬಿಜೆಪಿಯವರು ಮೀಸಲಾತಿಗೆ ಹಿಂದಿನಿಂದಲೂ ವಿರೋಧ ಇದ್ದಾರೆ. ಭ್ರಮಾಲೋಕದಲ್ಲಿರುವ ಅವರಿಗೆ ಯಾರ ವಿರುದ್ಧ ಯಾರನ್ನೊ ಎತ್ತಿಕೊಟ್ಟರೆ ಮತ ಬೀಳುತ್ತದೆ ಎಂಬ ಆಲೋಚನೆ ಮಾಡುವುದು ಮಾತ್ರ ಗೊತ್ತು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ ಹೇಳಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ‘ಜಾತಿ ಗಣತಿಯ ಅಗತ್ಯ ಮತ್ತು ಲಾಭಗಳು, ಹಿಂದುಳಿದ ವರ್ಗಗಳ ಸಬಲೀಕರಣ ಮತ್ತು ಮೀಸಲಾತಿ ’ಎಂಬ ವಿಷಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿದರು.

ಮೀಸಲಾತಿ ವಿಚಾರದಲ್ಲಿ ಕರ್ನಾಟಕಕ್ಕೆ ಇರುವ ಇತಿಹಾಸವನ್ನು ಮರೆಯಬಾರದು. ಈ ಜಾತಿವಾರು ಜನಗಣತೆ ಆರಂಭ ಗೊಂಡಿದೆ. ಜಾತಿವಾರು ಜನಗಣತಿಯನ್ನು ಆರಂಭಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. 2003-04ರಲ್ಲಿ ಆಗಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಕರ್ನಾಟಕಕ್ಕೆ ಜಾತಿಗಣತಿ ಪ್ರಾರಂಭಿಸಲು 21.5 ಕೋಟಿ ರೂ. ನೀಡಿತ್ತು. 2007ರಲ್ಲಿ ತಾನು ಆಯೋಗದ ಅಧ್ಯಕ್ಷನಾದಾಗ ಸಿದ್ದರಾಮಯ್ಯವರು 1ಕೋಟಿ ರೂ. ಸೇರಿಸಿಕೊಟ್ಟರು. ಆದರೆ ಬಳಿಕ ದುರದೃಷ್ಟ ವಷಾತ್ ಬಿಜೆಪಿ ಸರಕಾರ ಬಂದು ಎಲ್ಲವನ್ನು ಹಾಳು ಮಾಡಿತ್ತು ಎಂದು ಹೇಳಿದರು.

ಮೀಸಲಾತಿ ಮೊದಲು ನೀಡಿದವರು ಟಿಪ್ಪು ಸುಲ್ತಾನ್: ಕರ್ನಾಟಕದಲ್ಲಿ ನಮ್ಮದೇ ಆದ ಇತಿಹಾಸ ಇತಿಹಾಸ ಇದೆ. ದೇಶದಲ್ಲೇ ಮೊದಲ ಬಾರಿ ಔನೌಪಚಾರಿಕವಾಗಿ ಮೀಸಲಾತಿ ಕೊಟ್ಟವರು ಟಿಪ್ಪು ಸುಲಾನ್ . ಆತ ಒಕ್ಕಲಿಗರಿಗೆ, ಈಡಿಗರಿಗೆ, ಕುರುಬರಿಗೆ ಭೂಮಿಯನ್ನು ಹಂಚಿದ್ದರು. ಭೂಮಿ ಇಲ್ಲದವರಿಗೆ ಭೂಮಿ ಕೊಡೊಣ ಎಂದು ಭೂಮಿ ಹಂಚಿದ್ದಾರೆ. ಇದು ಮೊದಲ ಮೀಸಲಾತಿಯಾಗಿದೆ. ಆಬಳಿಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್ ಆಯೋಗ ಮಾಡಿ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರು ಎಂದು ವಿಭಜಿಸಿ, ಬ್ರಾಹ್ಮಣೇತರರಿಗೆ ಮೀಸಲಾತಿ ನೀಡುತ್ತಾರೆ. ಮುಂದೆ ದೇವರಾಜ ಅರಸರು ಹಾವನೂರು ಆಯೋಗ ರಚನೆ ಮಾಡಿ ಮೀಸಲಾತಿ ನೀಡುತ್ತಾರೆ. ಹೀಗೆ ಕರ್ನಾಟಕಕ್ಕೆ ತನ್ನದೆ ಆದ ಇತಿಹಾಸ ಇದೆ ಎಂದು ಹೇಳಿದರು.

ಮೀಸಲಾತಿ ಎಂದು ಶಬ್ಬ ಬಳಸುವುದು ತಪ್ಪು. ಅದನ್ನು ನಾವು ಪ್ರಾತಿನಿಧ್ಯ ಎಂದು ಕರೆಯಬೇಕು. ಯಾರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲವೂ ಅವರಿಗೆ ಪ್ರಾತಿನಿಧ್ಯ ಕೊಡುವುದು ಆಗಿದೆ. ಎಚ್. ಕಾಂತರಾಜ್ ವರದಿಯಿಂದ ನಮಗೆ ಚಿತ್ರಣ ಸಿಗುತ್ತಿದೆ. ಕಳೆದ 30-40 ವರ್ಷಗಳಲ್ಲಿ ಯಾರಿಗೆಲ್ಲ ಪ್ರಾತಿನಿಧ್ಯ ನೀಡಲಾಯಿತು. ಯಾರಿಗೆಲ್ಲ ಸಿಗಲಿಲ್ಲ ಎನ್ನುವುದು ಗೊತ್ತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಲೋಹಿಯಾ ಹೇಳುವಂತೆ ಎಸ್‌ಸಿಎಸ್‌ಟಿಯವರು ಬರೀ ನೋವು ಅನುಭವಿಸುತ್ತಿದ್ದರೆ . ಹಿಂದುಳಿದವರು ಯಾತನೆ ಅನುಭವಿಸುತ್ತಿದ್ದಾರೆ. ಆನೇಕ ಮುಸ್ಲಿಮರಿಗೆ ತಾವು ಹಿಂದುಳಿದ ವರ್ಗಕ್ಕೆ ಸೇರಿದ್ದೇವೆ ಎನ್ನುವುದು ಗೊತ್ತಿಲ್ಲ. ಈ ವರ್ಗಕ್ಕೆ ಕ್ರೈಸ್ತರು, ಜೈನರು, ಬುದ್ಧರು, ಸಿಖ್ಖರು ಸೇರುತ್ತಾರೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ್ ಮಾತನಾಡಿ ಜಾತಿ ಗಣತಿ ಅಗತ್ಯ. ಇದು ಇಲ್ಲದಿದ್ದರೆ ನಮ್ಮ ಸಮಾಜವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅರ್ಹರು ಸವಲತ್ತುಗಳಿಂದ ವಂಚಿತರಾಗು ತ್ತಾರೆ ಎಂದು ಹೇಳಿದರು.

ಜಾತಿ ಸಮೀಕ್ಷೆಯಿಂದ ಸಮಾಜ ಒಡೆಯುತ್ತದೆ ಮತ್ತು ಸಮಾಜದ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂಬ ಕಲ್ಪನೆ ಸರಿಯಲ್ಲ ಎಂದು ನುಡಿದರು. ಇಡಬ್ಲ್ಯುಎಸ್ ವ್ಯಾಪ್ತಿಗೆ ಯಾರನ್ನು ತರಲಾಗಿತ್ತೊ ಅವರೆಲ್ಲ ಹಿಂದೆ ಶೇ 27 ಮೀಸಲಾತಿಯಲ್ಲಿ ಹೆಚ್ಚು ಪ್ರಯೋಜನ ಪಡೆದಿದ್ದರು ಎಂದು ಅಭಿಪ್ರಾಯಪಟ್ಟರು. ಮಾಜಿ ಸಚಿವ ಬಿ. ರಮಾಥಾಥ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸ್ವಾಗತಿಸಿದರು.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News