×
Ad

ಸಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚ್ ನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಕೆ

Update: 2023-10-27 10:24 IST

ಹಳೆಯಂಗಡಿ, ಅ.28: ವಿದ್ಯಾರ್ಥಿಗಳು ಶ್ರದ್ಧೆಯಿಂದ ಶೈಕ್ಷಣಿಕ ಸಾಧನೆಗೈಯಬೇಕು. ಸಮಾಜದಲ್ಲಿ ಸತ್ಪ್ರಜೆಗಳಾಗಿ ಮೂಡಿ ಬರಬೇಕಾದರೆ ದೇವಾಲಯಗಳನ್ನು ಪ್ರೀತಿಸಿ, ಗೌರವಿಸಿದರೆ ಮುಂದಿನ ದಿನಗಳಲ್ಲಿ ದಾನ ಧರ್ಮ ಮಾಡಲು ಶಕ್ತರಾಗುತ್ತಾರೆ ಎಂದು ಚರ್ಚ್ ಆಫ್ ಸೌತ್ ಇಂಡಿಯಾ ಸದರ್ಸ್ ಡಯಾಸ್ ನ ಉಪಾಧ್ಯಕ್ಷ ರೆವೆರಂಡ್ ವಿಕ್ಟರ್ ಹೇಳಿದ್ದಾರೆ.

ಅವರು ಹಳೆಯಂಗಡಿಯ ಸಿ.ಎಸ್.ಐ. ಅಮ್ಮನ್ ಮೆಮೋರಿಯಲ್ ಚರ್ಚ್ ವತಿಯಿಂದ ಕಳೆದ ಬಾರಿ ಪಿಯುಸಿ ಮತ್ತು ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆಯಂಗಡಿ ಸಭಾ ಪಾಲಕ ರೆವೆರೆಂಡ್ ಅಮೃತ ರಾಜ್ ಖೋಡೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಭಾ ಪರಿಪಾಲನಾ ಸಮಿತಿಯ ಆಸ್ಟಿನ್ ಕರ್ಕಡ, ವಸಂತ ಬರ್ನಾಡ್, ಲಾವಣ್ಯಾ ಕೋಟ್ಯಾನ್, ಶರ್ಲಿ ಬಂಗೇರ, ಜೇಮ್ಸ್ ಕರ್ಕಡ ಮೊದಲಾದವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News