×
Ad

ಪೊಂಪೈ ಮಾತೆಯ ನವದಿನಗಳ ನೊವೆನಾಕ್ಕೆ ಚಾಲನೆ

Update: 2023-12-01 22:30 IST

ಮಂಗಳೂರು, ಡಿ.1: ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಅಧಿಕೃತ ಪುಣ್ಯಕ್ಷೇತ್ರ ಲೇಡಿಹಿಲ್ ಪೊಂಪೈ ಮಾತೆಯ ಪುಣ್ಯ ಕ್ಷೇತ್ರದಲ್ಲಿ ವಾರ್ಷಿಕ ಹಬ್ಬದ ಅಂಗವಾಗಿ ನವ ದಿನಗಳ ನೊವೆನಾ ಪ್ರಾರ್ಥನೆಗೆ ಶುಕ್ರವಾರ ಚಾಲನೆ ನೀಡಲಾಯಿತು.

ಪುಣ್ಯ ಕ್ಷೇತ್ರದ ನಿರ್ದೇಶಕ ಹಾಗೂ ಉರ್ವ ಚರ್ಚಿನ ಪ್ರಧಾನ ಧರ್ಮಗುರು ಫಾ. ಬೆಂಜಮಿನ್ ಪಿಂಟೋ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಸಹಾಯಕ ಧರ್ಮಗುರು ಫಾ. ಜಾನ್ಸನ್ ಪಿರೇರಾ, ಫಾ. ಹೆನ್ರಿ ಸಿಕ್ವೇರಾ, ಐಸಿಎಂವೈ ನಿರ್ದೇಶಕ ಅಶ್ವಿನ್ ಕಾರ್ಡೊಜಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲೋಯ್ಡ್ ಲೋಬೊ, ಕಾರ್ಯದರ್ಶಿ ಸಿಲ್ವಿಯಾ ಮಸ್ಕರೇನಸ್, ಕೋ-ಆರ್ಡಿನೇಟರ್ ಕೆವಿನ್ ಮಾರ್ಟಿಸ್, ಲೇಡಿಹಿಲ್ ಕಾನ್ವೆಂಟ್‌ನ ಮುಖ್ಯಸ್ಥೆ ಭಗಿನಿ ವೈಲೇಟ್ ತಾವ್ರೋ ಉಪಸ್ಥಿತರಿದ್ದರು.

ಒಂಬತ್ತು ದಿನಗಳ ಕಾಲ ನಾನಾ ವಿಚಾರಗಳ ಮೇಲೆ ನೊವೆನಾಗಳು ಸಾಗಲಿದ್ದು, ಡಿ.10ರಂದು ಪುಣ್ಯ ಕ್ಷೇತ್ರದ ವಾರ್ಷಿಕ ಹಬ್ಬ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News