×
Ad

ಶ್ವಾನ ನೋಂದಣಿ ಪ್ರಮಾಣ ಪತ್ರ; ಗೊಂದಲ ಬೇಡ: ಮಂಗಳೂರು ಮನಪಾ ಆಯುಕ್ತ

Update: 2023-12-01 22:40 IST

ಮಂಗಳೂರು,ಡಿ.1: ಸಾರ್ವಜನಿಕರು ಶ್ವಾನ ನೋಂದಣಿ ಪ್ರಮಾಣ ಪತ್ರ ಪಡೆಯುವ ಯಾವುದೇ ಗೊಂದಲ ಬೇಡ ಎಂದು ಮಂಗಳೂರು ಮನಪಾ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯ ಶ್ವಾನ ಹೊಂದಿರುವ ನಾಗರಿಕರು ಶ್ವಾನ ನೋಂದಣಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ ಕೋರಿ ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಗೆ ಹಲವು ಪತ್ರಗಳು ಬಂದಿದೆ. ಈ ವಿಷಯದ ಬಗ್ಗೆ ಸಾರ್ವಜನಿಕರು ಹಾಗೂ ಪ್ರಾಣಿಪ್ರಿಯರಲ್ಲಿ ಗೊಂದಲವಿರುವುದು ಗಮನಕ್ಕೆ ಬಂದಿದೆ. ಶ್ವಾನನೋಂದಣಿ ಪ್ರಮಾಣ ಪತ್ರ ಪಡೆಯುವ ಬಗ್ಗೆ ಇರುವ ಕಾನೂನು ನಿಯಮಗಳ ರಚನೆಯು ಪ್ರಗತಿಯಲ್ಲಿದೆ. ಸ್ಪಷ್ಟ ನಿರ್ಣಯವಾದ ಬಳಿಕ ಈ ಬಗ್ಗೆ ಮಾಹಿತಿ ನೀಡಲಾಗುವುದು. ಆವರೆಗೆ ಸಾರ್ವಜನಿಕರು ಶ್ವಾನ ನೋಂದಣಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಯಾವುದೇ ನಿರಾಕ್ಷೇಪಣಾ ಪತ್ರ ಮತ್ತು ದಾಖಲೆಗಳ ಕುರಿತು ಗೊಂದಲಕ್ಕೆ ಒಳಗಾಗಬಾರದು ಎಂದು ಆಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News