ಅಲ್ ಬಿರ್ರ್ ಜಿಲ್ಲಾ ಮಟ್ಟದ ಕಿಡ್ಸ್ ಫೆಸ್ಟ್ ಸ್ವಾಗತ ಸಮಿತಿ ರಚನೆ
ಮೂಡುಬಿದಿರೆ, ಡಿ.2: ಪ್ರಸಕ್ತ (2023-24) ಸಾಲಿನ ದ.ಕ.ಜಿಲ್ಲಾ ಮಟ್ಟದ ‘ಕಿಡ್ಸ್ ಫೆಸ್ಟ್’ ತೋಡಾರಿನ ಆದರ್ಶ್ ಅಲ್ ಬಿರ್ರ್ ನಲ್ಲಿ ನಡೆಯಲಿದ್ದು, ಅದರ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸಯ್ಯದ್ ಅಫಮ್ ಅಲಿ ತಂಙಳ್ ದುಆಗೈದರು. ಅಲ್ ಬಿರ್ರ್ ಜಿಲ್ಲಾ ಕೋರ್ಡಿನೇಟರ್ ಶುಕೂರ್ ದಾರಿಮಿ ಕರಾಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಉಸ್ಮಾನ್ ಹಾಜಿ ಏರ್ ಇಂಡಿಯಾ, ಉಪಾಧ್ಯಕ್ಷರಾಗಿ ಎಂ.ಎಚ್. ಮೊಹಿದ್ದೀನ್ ಹಾಜಿ ಅಡ್ಡೂರ್, ಸಂಚಾಲಕರಾಗಿ ಅಬ್ದುಲ್ ಸಲಾಂ ಬೂಟ್ ಬಝಾರ್, ಉಪ ಸಂಚಾಲಕರಾಗಿ ಉಸ್ಮಾನ್ ಸೂರಿಂಜೆ, ಕೋಶಾಧಿಕಾರಿಯಾಗಿ ಎಂ.ಜಿ. ಹಾಜಿ ತೋಡಾರ್ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಸಿತಾರ್ ಮಜೀದ್ ಹಾಜಿ, ಸಲೀಂ ಹಂಡೆಲ್, ಅಬ್ದುಲ್ ಅಝೀಝ್ ಮಾಲಿಕ್, ಅಶ್ರಫ್ ಗುತ್ತು, ಇಲ್ಯಾಸ್ ಎಸ್‌ಎಂ, ಅಲ್ತಾಫ್ ಲೊರೆಟ್ಟೋಪದವು, ಅಲ್ ಬಿರ್ರ್ ಶಾಲೆಯ ಎಲ್ಲಾ ಸಂಯೋಜಕರನ್ನು ಆಯ್ಕೆ ಮಾಡಲಾಯಿತು.
ಆದರ್ಶ ಶಾಲೆಯ ಸಂಯೋಜಕ ಆರೀಫ್ ಕಮ್ಮಾಜೆ ಸ್ವಾಗತಿಸಿ, ವಂದಿಸಿದರು.