ಮನುಷ್ಯನಲ್ಲಿರುವ ದಿವ್ಯತೆಯನ್ನು ಹೊರತರುವುದೇ ಸನಾತನ ಧರ್ಮದ ಗುರಿ: ಸ್ವಾಮಿ ನಿರ್ಭಯಾನಂದ ಸರಸ್ವತಿ
ಮಂಗಳೂರು :ಸನಾತನ ಧರ್ಮ ಶಾಶ್ವತವಾದುದು ಮತ್ತು ಅದು ವೇದ ಮತ್ತು ಉಪನಿಷತ್ತುಗಳನ್ನು ಆಧರಿಸಿದ ಜೀವನ ಕ್ರಮ. ಮನುಷ್ಯನಲ್ಲಿರುವ ದಿವ್ಯತೆಯನ್ನು ಹೊರತರುವುದೇ ಅದರ ಗುರಿ ಎಂದು ಗದಗ ಹಾಗೂ ವಿಜಯಪುರದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದ್ದಾರೆ.
ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಸ್ವಚ್ಛ ಮಂಗಳೂರು ಫೌಂಡೇಷನ್‌ಮತ್ತು ಎಸ್‌ಸಿಎಸ್ ಆಸ್ಪತ್ರೆ, ಮಂಗಳೂರು ಸಹಯೋಗದೊಂದಿಗೆ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆದ ಉಪನ್ಯಾಸ ಮಾಲಿಕೆಯ ಎರಡನೇ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿಜಿತ ಕಾಮಾನಂದಜಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ ‘ಭಾರತ ಪುರಾತನ ಕಾಲದಿಂದಲೂ ಜಗತ್ತಿಗೆ ಬಹಳಷ್ಟು ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಜಗತ್ತಿನ ಬೆಳವಣಿಗೆಯಲ್ಲಿ ಇಂದಿಗೂ ಭಾರತದ್ದು ಸಿಂಹಪಾಲು. ಭಾರತದ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳು, ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಜನರಿಗೆ ತಿಳಿಯಪಡಿಸಲು ಹಾಗೂ ಇವುಗಳನ್ನು ಪಸರಿಸಲು ನಮ್ಮ ಸ್ವಯಂಸೇವಕರತಂಡ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ನುಡಿದರು.
ಎಸ್‌ಸಿಎಸ್ ಆಸ್ಪತ್ರೆ ಇದರ ಚೇರ್ಮನ್‌ಡಾ. ಜೀವರಾಜ ಸೊರಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮದ ಸುಮೇಧಾ ಮೈತ್ರಿಮ್ ಭಜತ ಎಂಬ ಹಾಡನ್ನು ಹಾಡಿದರು.
ಮುಖ್ಯ ಭಾಷಣಕಾರ ಸ್ವಾಮಿ ನಿರ್ಭಯಾನಂದ ಸರಸ್ವತಿ ಭಾಷಣ ಸಂವಾದ ಕಾರ್ಯಕ್ರಮ ನಡೆಯಿತು. ಸಂವಾದವನ್ನು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ. ರವಿಶಂಕರ್ ನಡೆಸಿದರು.
ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ ಸೊರಕೆ, ಶಿಕಾರಿಪುರ ಕೃಷ್ಣಮೂರ್ತಿ, ಜಗದೀಶ್ ಶೇಣವ, ರವೀಂದ್ರನಾಥ ಶ್ಯಾನುಭೋಗ್, ವಿರೂಪಾಕ್ಷ ದೇವರಮನೆ, ಅಜಯ್ ಶೆಟ್ಟಿ, ಉಮಾನಾಥ್ ಕೋಟೆಕಾರ್, ಮುಂತಾದವರು ಉಪಸ್ಥಿತರಿದ್ದರು.
ಜಿಜ್ಞಾಸಾದ ಸಂಯೋಜಕ ಮತ್ತು ಭಾರತೀಯ ಸೇನೆಯ ನಿವೃತ್ತಯೋಧ ಕ್ಯಾಪ್ಟನ್ ಗಣೇಶ್ ಕಾರ್ಣಿಕ ಸ್ವಾಗತಿಸಿದರು, ಜಿಜ್ಞಾಸಾದ ಸಹ ಸಂಯೋಜಕ ಮತ್ತು ನಿಟ್ಟೆ ಇನ್‌ಸ್ಟಿಟ್ಯೂಟ್‌ಆಫ್ ಫಿಜಿಯೋಥೆರಫಿ ಪ್ರಾಂಶುಪಾಲ ಪ್ರೊ.ಧನೇಶ್‌ಕುಮಾರ್ ವಂದಿಸಿದರು, ಪ್ರಾಧ್ಯಾಪಕ ಸಂತೋಷ್ ಆಳ್ವ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.
ಇತ್ತೀಚಿಗೆ ಕಾಶ್ಮೀರದ ರಜೌರಿ ಸೆಕ್ಟರ್‌ನಲ್ಲಿ ಉಗ್ರಗಾಮಿಗಳನ್ನು ಹತ್ತಿಕ್ಕುವ ಸಂದರ್ಭದಲ್ಲಿ ಮಡಿದ ಭಾರತೀಯ ಸೇನೆಯ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.