×
Ad

ಸಾಣೂರು : ಸರಕಾರಿ ಕಾಲೇಜಿನ ರಂಗಮಂದಿರ ಉದ್ಘಾಟನೆ, ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

Update: 2023-12-04 21:56 IST

ಕಾರ್ಕಳ : ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರು ಇಲ್ಲಿನ ವಿಸ್ತ್ರತ ರಂಗ -ಮಂದಿರ ಕಮಲ್ ತಾರಾ ಇದರ ಉದ್ಘಾಟನೆ ಹಾಗೂ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡುತ್ತಾ, ಹತ್ತು ವರ್ಷಗಳ ಹಿಂದೆ ಕಟ್ಟಡವಿಲ್ಲದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಣೂರು ಅಗತ್ಯವಿರುವ ಸವಲತ್ತುಗಳನ್ನು ಪ್ರತೀವರ್ಷ ಬೇಡಿಕೆಯಿಟ್ಟು, ಪೊರೈಸಿಕೊಂಡು ಬರುತ್ತಿದ್ದು, ಒಳ್ಳೆಯ ಫಲಿತಾಂಶವನ್ನೂ ದಾಖಲಿಸಿಕೊಳ್ಳುವಲ್ಲಿ ಪ್ರಾಂಶುಪಾಲರು, ಮುಖ್ಯೋಪಾಧ್ಯಾ ಯರು, ಉಪನ್ಯಾಸಕರು, ಅಧ್ಯಾಪಕರು ಹಾಗೂ ಕಾಲೇಜು ಹಾಗೂ ಪ್ರೌಢಶಾಲಾ ಅಭಿವೃದ್ಧಿ ಸಮಿತಿಗಳ ಶ್ರಮ ಬಹಳಷ್ಟಿದೆ ಎಂದರು.

ವಿಸ್ತೃತ ರಂಗಮಂದಿರದ ದಾನಿಗಳಾದ ಪ್ರತಿಭಾ ಭಂಡಾರ್ಕರ್ ಹಾಗೂ ಅರುಣ್ ಭಂಡಾರ್ಕರ್ ದಂಪತಿಗಳನ್ನು ಸನ್ಮಾನಿಸಿ, ಶುಭ ಹಾರೈಸಿದರು. ಸಭೆಯಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಉಪಸ್ಥಿತಿ ಸಮಾಜಕ್ಕೆ ಪ್ರೇರಣೆಯಾಗಲೆಂದರು ಮುಖ್ಯ ಅತಿಥಿ ಸ್ಥಾನದಿಂದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ಮಾತನಾಡುತ್ತಾ, ತಾನು ಶಾಲೆಯನ್ನು ಸ್ಥಾಪಿಸಲು ಪಟ್ಟ ಶ್ರಮ ಮೆಲುಕು ಹಾಕಿದರು. ಸರಕಾರಿ ಪದವಿಪೂರ್ವ ಕಾಲೇಜು ಸಾಣೂರು ಬೆಳೆದು ನಿಂತ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನೂತನ ವಿಸ್ತ್ರತ ಕಲಾ ಮಂಟಪದ ದಾನಿಗಳಾದ ವಿದ್ಯಾಸಂಸ್ಥೆಯ ಪೂರ್ವ ವಿದ್ಯಾರ್ಥಿನಿಯೂ ಆಗಿದ್ದ ಪ್ರತಿಭಾ ಅರುಣ್ ಭಂಡಾರ್ಕರ್ ರವರು ಮಾತನಾಡುತ್ತಾ,ತನ್ನ ಶಾಲಾ ದಿನಗಳನ್ನು ನೆನಪಿಸುತ್ತಾ,ತನ್ನ ತೀರ್ಥರೂಪರಾದ, ಅಜಾತಶತ್ರು, ಸಮಾಜಸೇವಕ, ಕಮಾಕ್ಷ ವಿ ಕಾಮತ್ ಈ ವಿದ್ಯಾಸಂಸ್ಥೆಯ ಸ್ಥಾಪಕರಾಗಿದ್ದು,ಅವರಷ್ಟು ಸಮಾಜಸೇವೆ ಮಾಡಲು ಆಗದಿದ್ದರೂ, ಅವರ ಸವಿನೆನಪಿಗಾಗಿ ಕಮಲ್ ತಾರಾ ವಿಸ್ತ್ರತ ನೂತನ ರಂಗಮಂದಿರದ ನಿರ್ಮಾಣ ಕಾರ್ಯ ನಮ್ಮಿಂದ ಆಗಿದೆ ಎಂದು ಹೇಳುತ್ತಾ,ಅದಕ್ಕೆ ಅವಕಾಶ ಮಾಡಿಕೊಟ್ಟ ವಿದ್ಯಾಸಂಸ್ಥೆ ಗೆ ಸಂತೃಪ್ತಿಯ ಕೃತಜ್ಞತೆ ಸಲ್ಲಿಸಿದರು.

ಸಾಣೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರರು,ದಾನಿಗಳೂ ಆಗಿರುವ ವೇದಮೂರ್ತಿ ಶ್ರೀ ರಾಮಭಟ್ ಆಶೀರ್ವಚನ ನೀಡಿದರು.

ವಿಸ್ತ್ರತ ರಂಗಮಂದಿರದ ನಿರ್ಮಾಣಕ್ಕೆ ಸಹಕರಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಡಾ.ಮೋಹನ್ ದಾಸ್ ಜಿ.ಪ್ರಭು ಕಾಲೇಜಿನ ಸಂಸ್ಥಾಪಕರಾಗಿದ್ದ ಕಮಲಾಕ್ಷ ಕಾಮತ್ ರವರ ಸಂಸ್ಮರಣೆ ಗೈದರು.

ಸನ್ಮಾನದ ಗೌರವವನ್ನು ಸ್ವೀಕರಿಸಿದ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಪ್ರೌಢ ಶಾಲೆಯ ನಿವೃತ್ತ  ಮುಖ್ಯೋಪಾಧ್ಯಾ ಯಿನಿ ಹರ್ಷಿಣಿ ಕೆ. ಸಾಣೂರು ಕಾಲೇಜಿನಲ್ಲಿ ತನ್ನ ಹಿಂದಿನ ಸೇವಾದಿನಗಳನ್ನು ನೆನಪಿಸುತ್ತಾ,ಅಂದಿನಿಂದ ಉಳಿಸಿ, ಬೆಳೆಸಿಕೊಂಡು ಬಂದ ಬಾಂಧವ್ಯದ ಬಗ್ಗೆ ಮಾತನಾಡಿದ ಅವರು ವಿದ್ಯಾರ್ಥಿಗಳನ್ನು "ನನ್ನ ವಿದ್ಯಾರ್ಥಿ " ಎಂದು ಹೆಮ್ಮೆಯಿಂದ ಹೇಳುವವರು ಶಿಕ್ಷಕರು ಮಾತ್ರ ಎಂದರು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಆಂಗ್ಲ ಭಾಷಾ ಉಪನ್ಯಾಸಕಿ ಡಾ. ಸುಮತಿ ಪಿ ಸ್ವಾಗತಿಸಿದರು ಪ್ರಾಂಶುಪಾಲರಾದ ಸುಚೇತ ಕಾಮತ್ ಕಾಲೇಜಿನ ವರದಿ ಹಾಗೂ ಪ್ರಭಾರ ಮುಖ್ಯೋಪಾಧ್ಯಾಯರಾದ ಗಣೇಶ್ ಮೊಗವೀರ ರವರು ಪ್ರೌಢಶಾಲಾ ವರದಿ ಮಂಡಿಸಿದರು. ಪ್ರೇಮಮ್ಮ ಆರ್ ಸನ್ಮಾನಿತ ದಾನಿಗಳಾದ ಪ್ರತಿಭಾ ಅರುಣ್ ಭಂಡಾರ್ ಕಾರ್ ದಂಪತಿ ಹಾಗೂ ಗೌರಿ ಎನ್ ಜಿ ವೇದಿಕೆಯ ನಿರ್ಮಾಣಕ್ಕೆ ಕಾರಣಕರ್ತರಾದ ಡಾ.ಮೋಹನ್ ದಾಸ್ ಜಿ ಪ್ರಭುರವರನ್ನು ಸನ್ಮಾನ ಪೀಠಕ್ಕೆ ಕರೆಸಿ ಪರಿಚಯಿಸಿದರು.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಎನ್ ಪ್ರಶಾಂತ್ ಕಾಮತ್, ಮನೋಹರ ಕಾಮತ್, ವೇದಮೂರ್ತಿ ಶ್ರೀ ರಾಮಭಟ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಹರ್ಷಿಣಿ ಕೆ, ಪ್ರಾಂಶುಪಾಲರು, ಉಪನ್ಯಾಸಕರು, ಮುಖ್ಯೋಪಾಧ್ಯಾಯ ರನ್ನು, ಅಧ್ಯಾಪಕವೃಂದ, ಸಿಬ್ಬಂದಿ, ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜು ಹಾಗೂ ಶಾಲಾಭಿವೃದ್ಧಿ ಸಮಿತಿಯಿಂದ ಸನ್ಮಾನಿಸಲಾಯಿತು.

ವಾರ್ಷಿಕೋತ್ಸವ ದ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಸಾಣೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಯುವರಾಜ ಜೈನ್, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾದ ಅಶೋಕ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಆಚಾರ್ಯ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕರುಣಾಕರ ಕೋಟ್ಯಾನ್ ಉಪಸ್ಥಿತರಿದ್ದರು ವಿಮಲಾ ಹಾಗೂ ಸೀಮಾ ರೈ ನಿರೂಪಿಸಿದರು. ಚಿತ್ರಕಲಾ ಶಿಕ್ಷಕ ವಿರೇಶ್ ರವರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News