×
Ad

ಎಸ್ಸೆಸ್ಸೆಫ್ ಸೌಹಾರ್ದ ನಗರ ಯೂನಿಟ್ ನ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸನ್ಮಾನ ಸಮಾರಂಭ

Update: 2023-12-04 22:03 IST

ಬಜ್ಪೆ, ಡಿ.4: ಎಸ್ಸೆಸ್ಸೆಫ್ ಸೌಹಾರ್ದ ನಗರ ಯೂನಿಟ್ ನ ವತಿಯಿಂದ ಆಯೋಜಿಸಲಾಗುವ ರಾಷ್ಟ ಮಟ್ಟದ ಸಾಹಿತ್ಯೋತ್ಸವ ಸ್ಪರ್ಧೆಯ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮವು ರವಿವಾರ ಬಜ್ಪೆಯಲ್ಲಿ ನಡೆಯಿತು.

ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಜಬ್ಬ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆ ಗುರುತಿಸಿ ನಿಸಾರ್ ಕರಾವಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಾರಂಭದಲ್ಲಿ ಸಮಿತಿಯ ಅಧ್ಯಕ್ಷ ಹಫೀಜ್ ಕೊಳಂಬೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯ ಸಚೇತಕರಾದ ಐವನ್ ಡಿಸೋಜ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಇನಾಯತ್ ಅಲಿ, ಬಜ್ಪೆ ಜುಮಾ ಮಸೀದಿಯ ಖತೀಬ್ ಇಬ್ರಾಹಿಂ ಮದನಿ, ಕೆ.ಎಚ್. ಹುಸೈನ್ ಶರೀಫ್, ಸಾಮಾಜಿಕ ಕಾರ್ಯಕರ್ತರಾದ ಸಿರಾಜ್ ಬಜ್ಪೆ, ಗ್ರಾ.ಪಂ. ಮಾಜಿ ಸದಸ್ಯ ಜೇಕಬ್ ಪಿರೇರಾ, ಎಸ್ ವೈಎಸ್ ಕೊಳಂಬೆ ಘಟಕಾಧ್ಯಕ್ಷ ಎಂ.ಎಸ್. ಅಶ್ರಫ್ , ಎಂ.ಎಚ್. ಹಸನಬ್ಬ, ಎಂ.ಎಚ್. ಹನೀಫ್, ಇಸ್ಮಾಯಿಲ್ ಇಂಜಿನಿಯರ್, ಸತೀಶ್ ದೇವಾಡಿಗ , ರಾಕೇಶ್ ಕುಂದರ್, ಹನೀಫ್ ಹಿಲ್ ಟಾಪ್, ಅನ್ವರ್ ರಝಕ್ ಬಜ್ಪೆ, ಹಮೀದ್ ಕೊಳಂಬೆ, ನವಾಝ್ ಕೊಳಂಬೆ, ಹಕೀಮ್ ಕೊಳಂಬೆ ಮೊದಲಾದವರು ಉಪಸ್ಥಿತರಿದ್ದರು.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News