×
Ad

ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ: ‘ಉತ್ಕರ್ಷಣ್’ ಕಾಲೇಜ್ ಕ್ಲಬ್ ಉದ್ಘಾಟನೆ

Update: 2023-12-04 22:05 IST

ಮಂಗಳೂರು: ಕೆಂಜಾರಿನಲ್ಲಿರುವ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ‘ಉತ್ಕರ್ಷಣ್’ ಕಾಲೇಜ್ ಕ್ಲಬ್ ಉದ್ಘಾಟನೆಗೊಂಡಿದೆ.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆನರಾ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಡಾ. ಅರುಣ್‌ಕುಮಾರ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ತಾಂತ್ರಿಕ, ಸಾಂಸ್ಕೃತಿಕ, ಕ್ರೀಡೆ ಹಾಗೂ ಭಾಷಾ ಸಂವಹನದಲ್ಲಿ ಪರಿಣಿತರಾಗುವ ಕಡೆಗೆ ಗಮನ ಹರಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಇ. ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಈ ತರಹದ ಕ್ಲಬ್‌ಗಳು ವಿದ್ಯಾರ್ಥಿಗಳಿಗೆ ಅವರಲ್ಲಿರುವ ಸುಪ್ತ ಪ್ರತಿಭೆಗಳನ್ನು ಪ್ರದರ್ಶಿಸಲು ಸಹಾಯವಾಗುತ್ತದೆ. ತಾಂತ್ರಿಕ ಚಟುವಟಿಕೆ ಗಳು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದು ಹೇಳಿದರು.

ಉಪ ಪ್ರಾಂಶುಪಾಲೆ ಡಾ.ನೇತ್ರಾವತಿ ಪಿ.ಎಸ್. ಕ್ಲಬ್‌ನ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.

ಕಾಲೇಜಿನ ವಿದ್ಯಾರ್ಥಿಗಳಾದ ಕಂಪ್ಯೂಟರ್ ಸೈನ್ಸ್ ವಿಭಾಗದ ಅಮನ್ ನಿವೇದ್ ತಾಂತ್ರಿಕತೆಯ ಬಗ್ಗೆ, ಸಿವಿಲ್ ಇಂಜಿನಿಯರಿಂಗ್‌ನ ಸರ್ಫ್ರಾಝ್ ಭಾಷಾ ಸಂವಹನದ ಬಗ್ಗೆ, ಇನ್‌ಫಾರ್ಮೇಶನ್ ಸಯನ್ಸ್ ವಿಭಾಗದ ಪ್ರಜ್ವಲ್ ಕ್ರೀಡೆ, ಸಿವಿಲ್ ಇಂಜಿನಿಯರಿಂಗ್‌ನ ಅರ್ಜುನ್ ಮಾಧ್ಯಮದ ಬಗ್ಗೆ, ಕಂಪ್ಯೂಟರ್ ಸೈನ್ಸ್ ವಿಭಾಗದ ಶ್ರಾವ್ಯ ಸಾಂಸ್ಕೃತಿಕ ವಿಷಯ ಗಳ ಬಗ್ಗೆ ಮಾತನಾಡಿದರು.

ಕಾಲೇಜಿನ ವಿದ್ಯಾರ್ಥಿನಿ ಶ್ರೇಯ ಸ್ವಾಗತಿಸಿದರು, ವಿದ್ಯಾ, ಅರ್ಪಿತಾ, ವೈಷ್ಣವಿ ಪ್ರಾರ್ಥಿಸಿ ದರು. ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕಿ ಸಾಂಡ್ರಾ ಪಿ.ವಿ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News