×
Ad

ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ; ಮಹಿಳೆಯರು, ಮಕ್ಕಳು ಸಾಕ್ಷರತಾ ಸಾಧಕರ ಜೊತೆ ಹಾಡು ಹಾಡಿ, ಸಂವಾದ ಕಾರ್ಯಕ್ರಮ

Update: 2023-12-05 21:54 IST

ಮಂಗಳೂರು: ಇಂದು ಬೆಳಿಗ್ಗೆ ಮುಡಿಪು ಜನ ಶಿಕ್ಷಣ ಟ್ರಸ್ಟ್ ಆವರಣಕ್ಕೆ ಆಗಮಿಸಿದ ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆಯ ಕರ್ನಾಟಕ ತಂಡದ ಸದಸ್ಯರು ಮುಡಿಪು ಜನ ಶಿಕ್ಷಣ ಕೇಂದ್ರದಲ್ಲಿ ಸ್ಥಳೀಯ ಸಂಘಟನೆಯ ಮಹಿಳೆಯರು, ಸಾಕ್ಷರತಾ ಸಾಧಕರು,ಸ್ವ ಸಹಾಯ ತಂಡದ ಸದಸ್ಯರು, ಸ್ಥಳೀಯ ಗ್ರಾಮೀಣ ಮಹಿಳಾ ಸಾಧಕರು, ಸ್ವಚ್ಛತಾ ಕಾರ್ಯಕರ್ತರು ವಿದ್ಯಾರ್ಥಿಗಳು , ಆದಿವಾಸಿ ಮಹಿಳಾ ಸಾಧಕರು ಸೇರಿದಂತೆ ವಿವಿಧ ಜನ ಸಮುದಾಯದ ಪ್ರತಿನಿಧಿಗಳ ಜೊತೆ ಸಂವಾದ ನಡೆಸಿದರು.

ಸಿದ್ಧನ ಗೌಡ ಪಾಟೀಲ್ ಅವರ ತಂಡ ಮಾನವರಾಗೋಣ ಬನ್ನಿ ಮಾನವರಾಗೋಣ... ಹಾಡು ಹಾಡಿದರು.

ರಂಗ ಕರ್ಮಿ ಪ್ರಸನ್ನ ಅವರು ಹೆಗ್ಗೋಡಿನ 'ಚರಕ' ಸಂಸ್ಥೆಯ ಮಹಿಳೆಯರ ಸಂಘಟನೆ ಯ ಬಗ್ಗೆ ತಿಳಿಸುತ್ತಾ,ಶ್ರಮ ಶಕ್ತಿಗೆ ಗೌರವ ಸಿಗಬೇಕು ಅದರಲ್ಲೂ ಮಹಿಳಾ ಶ್ರಮ ಶಕ್ತಿಗೂ ಸಮಾನ ಗೌರವ ದೊರೆಯು ವಂತಾಗಬೇಕು.ನಮ್ಮ ದೇಶದಲ್ಲಿ ಮನೆಯ ಹೊರಗೆ ಡುಡಿಯುವ ಗಂಡಸರ ಕೆಲಸಗ ಳನ್ನು ಮಾತ್ರ ಕೆಲಸ ಎಂದು ಪರಿಗಣಿ ಸಲಾಗುತ್ತದೆ. ಆದರೆ ಮನೆಯ ಒಳಗೆ ಇದ್ದು ಕುಟುಂಬದ ನಿರ್ವಹಣೆ ಗಾಗಿ ದುಡಿಯುವ ಮಹಿಳೆಯರು ಮಕ್ಕಳು, ವಯಸ್ಸಾದವರ ದುಡಿಮೆಗೂ ಗೌರವ ಯುತವಾದ ಮನ್ನಣೆ ದೊರೆಯ ಬೇಕಾಗಿದೆ. ನಮ್ಮ ಕೈ ಕೆಲಸದ ಮೂಲಕ ಮಾಡುವ ಉತ್ಪನ್ನಗಳು ನಮ್ಮಲ್ಲಿ ಹೇರಳವಾಗಿದ್ದು, ಅಪಾರವಾದ ಕೌಶಲ್ಯ ಜೀವಂತವಾಗಿದೆ. ಹಾಗಾಗಿ ಯಾಂತ್ರೀಕೃತ ಕೈಗಾರಿಕೆಗಳ ಬದಲು ಕರಕುಶಲ ಉತ್ಪನ್ನಗಳಿಗೆ ಒತ್ತು ನೀಡಬೇಕು ಎಂದು ಪ್ರಸನ್ನ ಹೆಗ್ಗೋಡು ಹೇಳಿದರು.

ಸಂಘಟನೆ ಕಟ್ಟಲು ಶಿಸ್ತಿನ ಅಗತ್ಯವಿದೆ. ಆದರೆ ಇಂದು ದೇಶದಲ್ಲಿ ಗಂಡಸರಿಗಿಂತ ಒಂದಷ್ಟು ಆರ್ಥಿಕ ಶಿಸ್ತು ಹೆಂಗಸರಿಂದ ಮಾತ್ರ ಉಳಿದಿದ್ದು ಹಣ ಉಳಿಸಿ ಕುಟುಂಬ ನಿರ್ವಹಣೆ ಮಾಡುತ್ತಾ ಬಂದಿರುವುದೇ ಸಾಕ್ಷಿ. ದುಡಿದು ಬಂದ ಹಣದಿಂದ ಸಂಘಟನೆ ನಡೆಸಬೇಕು.ಈ ನಿಟ್ಟಿನಲ್ಲಿ ಗಾಂಧಿ ನಮಗೆ ಮಾದರಿ.ಅವರು ತಾವೇ ಹತ್ತಿ ಯಿಂದ ಚರಕದ ಮೂಲಕ ನೂಲು ತೆಗೆದು ಬಂದ ಹಣ ತಮ್ಮ ವೆಚ್ಚ ಕ್ಕೆ ಬಳಸುತ್ತಿದ್ದ ಉದಾಹರಣೆ ನಮಗೆ ಪ್ರೇರಣೆ. ಮುಡಿಪು ಜನ ಶಿಕ್ಷಣ ಕೇಂದ್ರ ದಲ್ಲಿ ತಳಮಟ್ಟದಲ್ಲಿ ದುಡಿಯುವ ಮಹಿಳೆಯರ ಕೆಲಸ ಮಾದರಿಯಾಗಿದೆ ಎಂದು ಪ್ರಸನ್ನ ಹೆಗ್ಗೋಡು ಅಭಿಪ್ರಾಯಪಟ್ಟರು.

ಸಾಂಸ್ಕೃತಿಕ ಯಾತ್ರೆಯ ಸಂಚಾಲಕ ಸಿದ್ಧನಗೌಡ ಪಾಟೀಲ್ ಸಂವಾದ ನಡೆಸುತ್ತಾ,ಪ್ರೀತಿ ಮನುಷ್ಯನ ಮೂಲ ಗುಣ. ಓರ್ವ ವ್ಯಕ್ತಿ ಭೂಮಿಗೆ ಬಂದಾಗ ತಾಯಿಯ ಎದೆಹಾಲನ್ನು ಪ್ರೀತಿಯಿಂದ ಸ್ವೀಕರಿಸುತ್ತಾನೆ. ನಾವೆಲ್ಲಾ ದೇಶದಲ್ಲಿ ಪ್ರೀತಿಯಿಂದ ಬದುಕಿದ್ದೇವೆ.ಆದರೆ ಬೇರೆ ಬೇರೆ ಕಾರಣ ದಿಂದ ದ್ವೇಷದ ವಾತವರಣದ ಕಾರಣ ಪ್ರೀತಿಗೆ ತೆರೆ ಬಿದ್ದಿದೆ.ಆದರೆ ಪ್ರೀತಿ ನಮ್ಮ ನಡುವೆ ಇದೆ.ನಮ್ಮಲ್ಲಿರುವ ಪ್ರೀತಿಯನ್ನು ನೆನಪಿಸಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಉದ್ಯಮಗಳನ್ನು ಮನುಷ್ಯ ನಡೆಸಬೇಕು, ಅದರೆ ಇಂದು ಉದ್ಯಮಗಳನ್ನು ಯಂತ್ರಗಳು ನಡೆಸುತ್ತಿರುವುದು ಆತಂಕಕಾರಿ. ಈ ದೇಶದ ರೈತ ಬೆಳೆದ ಅನ್ನ ತಿಂದು ನಮಗೆ ಶಕ್ತಿ ಬಂದಿದೆಯೇ ಹೊರತು ವಿದೇಶಿ ಕಂಪನಿಗಳ ವಸ್ತುಗಳನ್ನು ಸೇವಿಸಿ ಅಲ್ಲ. ಆದರೂ ಕ್ರೀಡಾಪಟುಗಳು, ಸಿನಿಮಾ ನಟರು, ವಿದೇಶೀ ಕಾರ್ಪೊರೇಟ್ ಕಂಪೆನಿಗಳ ಪರ ಪ್ರಚಾರ ನಡೆಸುತ್ತಿದ್ದಾ ರೆಯೇ ಹೊರತು, ಈ ನೆಲ, ಜಲ, ರೈತರಿಗಾಗಿ ಹೋರಾಟ ನಡೆಸುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು. ನಮ್ಮ ನಿತ್ಯದ ಬದುಕು ದ್ವೇಷಕ್ಕೆ ಸಿಲುಕಬಾರದು ಎನ್ನುವುದು ನಮ್ಮ ಆಶಯ ಎಂದರು.

ಸಮಾರಂಭದಲ್ಲಿ ಸಾಮಾಜಿಕ ಕಾರ್ಯ ಕರ್ತ ಉದ್ಯಮಿ ರಮೇಶ್ ಶೇಣವ, ರಂಗಕರ್ಮಿ ಶಿವಪ್ರಸಾದ್ ಆಳ್ವ, ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ರೈ, ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೈದರ್ ಕೈರಂಗಳ, ಕುರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಲೋಲಾಕ್ಷಿ, ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಕನ್ಯಾ, ಉಳ್ಳಾಲ ತಾಲೂಕು ಜಮೀಯತುಲ್ ಫಲಾಹ್ ಅಧ್ಯಕ್ಷ ಅಬ್ದುಲ್ ನಾಸೀರ್ ಕೆ., ನಿವೃತ್ತ ಪ್ರಾಧ್ಯಾಪಕಿಯರಾದ ಬಿ.ಎಂ.ರೋಹಿಣಿ, ಪ್ರೊ.ಸಬೀಹಾ ಭೂಮಿ ಗೌಡ, ಪ್ರೊ.ಶಿವರಾಮ ಶೆಟ್ಟಿ ,ಸಾಹಿತಿ ಚಂದ್ರಶೇಖರ ಪಾತೂರು, ಪ್ರಕಾಶಕ ನಾಗೇಶ್ ಕಲ್ಲೂರು, ವಿಜಯ ಲಕ್ಷ್ಮೀ,ಡಾ.ಇಸ್ಮಾಯಿಲ್, ಹರೀಶ್, ಕರುಣಾಕರ, ಸೀತಾರಾಮ ಬೇರಿಂಜೆ, ಸ್ವಚ್ಛತಾ ಸೇನಾನಿ ಇಸ್ಮಾಯಿಲ್ ಕಣಂತೂರು, ಚಂದ್ರ ಹಾಸ ಕಣಂತೂರು, ಡಾ.ಅರುಣ್ ಪ್ರಕಾಶ್ ರ ಅಬೂಬಕ್ಕರ್ ಜಲ್ಲಿ ,ವಿದ್ಯಾ, ಅರುಣಾ, ಯಶೋಧ ಲಾಯಿಲಾ ,ಕಮಲ , ನಾರಾ ಯಣ,ಸುಂದರಿ ಕನ್ಯಾನ,ಪಾತುಂಞ, ಪುಷ್ಪ,ದೇವಿಕ,ರತ್ನಾಕರ ಪತ್ರಕರ್ತರಾದ ಪುಷ್ಪ ರಾಜ್ ಬಿ.ಎನ್, ಸತೀಶ್ ಇರಾ,ಅನ್ಸಾರ್ ಇನೋಳಿ ಇನ್ನಿತರರು ಉಪಸ್ಥಿತರಿದ್ದರು.

ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಮತ್ತು ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು.

ಪಾದಯಾತ್ರೆ ತಂಡದಲ್ಲಿ ಪ್ರಸನ್ನರ ಜೊತೆ,ಸಿದ್ಧನ ಗೌಡ ಪಾಟೀಲ್, ಬಿ.ರಾಜೇಶ್, ಸ್ವಾತಿ ಸುಂದರೇಶ್,ಜಗನ್ ಸಿ.ಕೆ,ಸುರೇಶ್, ತಿಮ್ಮಪ್ಪ, ಕುಕ್ಕೇಡಿ,ಶೇಖರ್, ರತ್ನ ಮಾಲ,ಡಿ.ಆದಿತ್ಯ,ಶಶಿಧರ್, ಸಾವಿತ್ರಿ ದಾವಣಗೆರೆ, ಪ್ರತೀಕ್ ಪುಣೆ ಮೊದಲಾ ದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News