×
Ad

ಗುರುಪುರ ಕರಾವಳಿ ಜೋಡುಕರೆ ಕಂಬಳ ಉತ್ಸವದ ಲಾಂಛನ ಬಿಡುಗಡೆ

Update: 2023-12-15 22:56 IST

ಮಂಗಳೂರು: ಗುರುಪುರ ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ (ರಿ) ಗುರುಪುರ ಇದರ ಆಶ್ರಯದಲ್ಲಿ ಗುರುಪುರ ಕಂಬಳ ಉತ್ಸವ ಇದರ ಲಾಂಛನವನ್ನು ಮಂಗಳೂರಿನ ಬಿಜೈನಲ್ಲಿರುವ ಹೋಟೆಲ್ ಓಷಿಯನ್ ಪರ್ಲ್ ನಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಇನಾಯತ್ ಅಲಿ ಬಿಡುಗ ಡೆಗೊಳಿಸಿ ಮಾತನಾಡುತ್ತಾ,ಗುರುಪುರ ಕಂಬಳ ಮಾದರಿ ಯಾಗಿ ನಡೆಯಲಿ, ಎಲ್ಲಾ ಜನ ಜೊತೆ ಯಾಗಿ ಸಾಗು ವಂತಾಗಲಿ. ತುಳುನಾಡಿನ ಶ್ರೀಮಂತ ಸಂಸ್ಕೃತಿಯ ಭಾಗವಾದ ಕಂಬಳ ಒಳ್ಳೆಯ ಉದ್ದೇಶದೊಂದಿಗೆ ಜನರ ಸಂಘಟನೆ ಯೊಂದಿಗೆ ಮಾದರಿಯಾಗಿ ನಡೆಯುವ ವಿಶ್ವಾಸ ಹೊಂದಿರುವುದಾಗಿ ಶುಭ ಹಾರೈಸಿದರು.

ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ (ರಿ) ಗುರುಪುರ ಇದರ ಅಧ್ಯಕ್ಷ ರಾಜ್ ಕುಮಾರ್ ತಿರುವೈಲ್ ಗುತ್ತು ಸ್ವಾಗತಿಸಿದರು.

ಸುರೇಂದ್ರ ಕಂಬಳಿ ಮಾತನಾಡುತ್ತಾ ತುಳು ನಾಡಿನ ಸಾಂಪ್ರದಾಯಿಕ ಆಚರಣೆಯ ಸಂಕೇತವಾಗಿ ಬಂದ ಕಂಬಳದ ಮೂಲಕ ಇನ್ನಷ್ಟು ವಿಸ್ತರಣೆಯಾಗಲಿ ಎಂದರು. ಅಂತರಾಷ್ಟ್ರೀಯ ಕಾರ್ ರೇಸ್ ಪಟು ಅಶ್ವಿನಿ ನಾಯಕ್ ಶುಭ ಹಾರೈಸಿದರು.

ಉಮೇಶ್ ರೈ ಪದವು ಮೇಗಿನ ಮನೆ,ಮಾಜಿ ಜಿ.ಪಂ ಸದಸ್ಯ ಯು.ಪಿ.ಇಬ್ರಾಹಿಂ,ಗಡಿಕಾರ ಪ್ರಮೋದ್ ರೈ ಉಪಸ್ಥಿತರಿದ್ದರು.

ಕರಾವಳಿ ಜೋಡುಕರೆ ಕಂಬಳ ಗುರುಪುರದ ಸದಸ್ಯರಾದ ಹರೀಶ್ ಭಂಡಾರಿ, ವಿನಯ ಕುಮಾರ್ ಶೆಟ್ಟಿ, ಯಶವಂತ ಶೆಟ್ಟಿ, ಪುರುಷೋತ್ತಮ,ಜಗದೀಶ್ ಆಳ್ವ ಗಿರೀಶ್ ಆಳ್ವ,ಸುನಿಲ್ ಗಂಜಿಮಠ, ಸುಧಾಕರ, ಗುರುಪುರ ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್ ಉಪಸ್ಥಿತರಿದ್ದರು. ವಿಜೇತ್ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News